ಬೆಂಗಳೂರು: ವಿಕ್ಟೋರಿಯಾ ಆಸ್ಪತ್ರೆಯ ನೆಪ್ರೋಯುರಾಲಜಿ ನಿರ್ದೇಶಕರ ಸಂಬಂಧಿಗೆ ಕೊರೋನಾ ವೈರಸ್ ಸೋಂಕು ತಗಲಿರುವುದು ದೃಢಪಟ್ಟಿದ್ದು, ವೈದ್ಯರು ನಾಪತ್ತೆಯಾಗಿದ್ದಾರೆ.
ಲಂಡನ್ ನಿಂದ ಬಂದ ಯುವತಿ ವೈದ್ಯರೊಂದಿಗೆ ಭಾನುವಾರ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ಸುತ್ತಾಡಿದ್ದರು. ಇದೀಗ ಆಸ್ಪತ್ರೆಯ ಸಿಬ್ಬಂದಿಯಲ್ಲಿ ಆತಂಕ ಉಂಟು ಮಾಡಿದೆ. ವಿದೇಶದಿಂದ ಬಂದ ಯುವತಿ ಮನೆಯಲ್ಲಿ ಇರದೇ ವೈದ್ಯರೊಂದಿಗೆ ಆಸ್ಪತ್ರೆಗೆ ಭೇಟಿ ನೀಡಿದ್ದರು.
ಸೋಂಕಿತ ಯುವತಿ ಜೊತೆ ಇದ್ದಂತಹ ನೆಪ್ರೋಯುರಾಲಜಿ ವೈದ್ಯ ಕೂಡ ಹಲವು ಸಭೆಗಳಲ್ಲಿ ಭಾಗವಹಿಸಿದ್ದರು. ಜೊತೆಗೆ ನೂರಾರು ಜನ ರೋಗಿಗಳನ್ನು ಭೇಟಿಯಾಗಿದ್ದರು. ಯುವತಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟ ಹಿನ್ನೆಲೆಯಲ್ಲಿ ವೈದ್ಯರು ನಾಪತ್ತೆಯಾಗಿದ್ದಾರೆ.