Wednesday, September 23, 2020
Wednesday, September 23, 2020

Latest Posts

ರಾಜ್ಯಸಭೆಯಲ್ಲಿ ವಿದೇಶಿ ದೇಣಿಗೆ (ನಿಯಂತ್ರಣ) ತಿದ್ದುಪಡಿ ಮಸೂದೆ ಅಂಗೀಕಾರ

ಹೊಸದಿಲ್ಲಿ: ವಿದೇಶಿ ದೇಣಿಗೆ (ನಿಯಂತ್ರಣ) ತಿದ್ದುಪಡಿ ಮಸೂದೆ 2020 ಅನ್ನು ಇಂದು ಗೃಹ ವ್ಯವಹಾರಗಳ ಇಲಾಖೆಯ ರಾಜ್ಯ ಸಚಿವ ನಿತ್ಯಾನಂದ ರೈ ಸದನದಲ್ಲಿ ಮಂಡಿಸಿದ್ದು, ರಾಜ್ಯಸಭೆಯ ಅನುಮೋದನೆ ದೊರೆತಿದೆ. ಈ ಕುರಿತು ಮಾತನಾಡಿದ ಅವರು,...

ಕೋವಿಡ್-19 : ಕೊಡಗು ಜಿಲ್ಲೆಯಲ್ಲಿ ಬುಧವಾರ 46 ಹೊಸ ಪ್ರಕರಣ ದೃಢ

ಕೊಡಗು: ಕೊಡಗು ಜಿಲ್ಲೆಯಲ್ಲಿ ಹತ್ತು ಮಂದಿ ಪೊಲೀಸ್ ಸಿಬ್ಬಂದಿ ಸಹಿತ ಬುಧವಾರ ಬೆಳಗ್ಗೆ 31 ಮತ್ತು ಮಧ್ಯಾಹ್ನ 15 ಸೇರಿದಂತೆ ಒಟ್ಟು 46 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿವೆ ಎಂದು ಜಿಲ್ಲಾಧಿಕಾರಿ ಅನೀಸ್...

ಮೃಗಾಲಯ ಪ್ರಾಣಿಗಳ ದತ್ತು ಸ್ವೀಕಾರ

ಮೈಸೂರು: ಮೈಸೂರು ಮೃಗಾಲಯದ ಪ್ರಾಣಿಗಳ ದತ್ತು ಸ್ವೀಕಾರ ಯೋಜನೆ ಅಡಿಯಲ್ಲಿ ಬೆಂಗಳೂರಿನ ಮೆ.ಕುಮಾರ್ ಆರ್ಗಾನಿಕ್ ಪ್ರೊಡಕ್ಸ್ ವತಿಯಿಂದ 1 ಲಕ್ಷ ರೂ. ಪಾವತಿಸಿ ‘ಮಾನ್ಯ’ ಎಂಬ ಹೆಣ್ಣು ಹುಲಿಯನ್ನು 25-08-2020 ರಿಂದ 24-08-2021...

ವಿಘ್ನ ವಿನಾಯಕನ ಆರಾಧನೆಗೆ ಕೊರೋನಾ ವಿಘ್ನ!

sharing is caring...!

ಮಹಾಂತೇಶ ಕಣವಿ

ಧಾರವಾಡ: ಶ್ರಾವಣ ಮಾಸ ಬಂತೆoದರೆ ಸಾಕು ಹಿಂದೂಗಳ ಹಬ್ಬಗಳು ಸಾಲುಗಟ್ಟಿ ನಿಲ್ಲುತ್ತವೆ. ಅಂತಹ ಹಬ್ಬಗಳ ಪೈಕಿ ಪ್ರಥಮ ವಂದಿತ, ಆದಿ ಪೂಜಿತ, ವಿಘ್ನ ನಿವಾರಕ ಗಣೇಶ ಚತುರ್ಥಿಯೂ ಒಂದು. ಜನರ ವಿಘ್ನ ಕಳೆಯುವ ವಿನಾಯಕನ ಆರಾಧನೆಗೆ ಕೊರೋನಾ ವಿಘ್ನ ಎದುರಾಗಿದೆ.
ಹೌದು, ಶ್ರಾವಣ ಮಾಸ ಕಳೆಯುತ್ತಿದ್ದಂತೆ ಗಣೇಶ ಚತುರ್ಥಿ ಆಚರಣೆಗೆ ಸಾರ್ವಜನಿಕರು ಅದ್ಧೂರಿ ತಯಾರಿ ನಡೆಸುತ್ತಾರೆ. ಆದರೆ, ಈ ಸಲ ಕೋವಿಡ್-19 ಹಾವಳಿಯಲ್ಲಿ ಎಲ್ಲವೂ ಕೊಚ್ಚಿಹೋಗಿದೆ. ಇದರಿಂದ ವರ್ಷವೀಡಿ ಗಣೇಶ ತಯಾರಿಸುವವರ ಬದುಕು ದುರ್ಬರಗೊಂಡಿದ್ದು ಮಾತ್ರ ಸುಳ್ಳಲ್ಲ.
ಸಾಂಸ್ಕೃತಿಕ ನಗರಿ ಧಾರವಾಡ ಜಿಲ್ಲೆಯಾದ್ಯಂತ ಕೊರೋನಾ ಹಾವಳಿ ನಡೆವೆಯೂ ವಿಘ್ನ ವಿನಾಯಕನ ಆರಾಧನೆಗೆ ಸಾರ್ವಜನಿಕರು ಅತ್ಯಂತ ಸರಳವಾಗಿ ಬರಮಾಡಿಕೊಳ್ಳಲು ಸಕಲ ಸಿದ್ಧತೆ ನಡೆಸುತ್ತಿದ್ದಾರೆ. ಆದರೆ, ನಿತ್ಯವೂ ಹೆಚ್ಚುತ್ತಿರುವ ಸೋಂಕು ಹಾಗೂ ಮೃತರ ಸಂಖ್ಯೆ ಗಣೇಶ ಚತುರ್ಥಿ ಆಚರಣೆಗೆ ನಿರಾಶೆ ಮೂಡಿಸಿದೆ.
ವರ್ಷಪೂರ್ತಿ ಖಾಲಿ ಇದ್ದರೂ, ಗಣೇಶ ಹಬ್ಬದಲ್ಲಿ ವರ್ಷದ ದುಡಿಮೆ ಕಾಣುವ ಗಣೇಶ ತಯಾರಕರ ಬದುಕು ಅಕ್ಷರಶಃ ನಲುಗಿದೆ.
ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮೂರಡಿಯಿಂದ, ಬೃಹತ್ ಗಾತ್ರದ ವಿವಿಧ ರೂಪದಲ್ಲಿ ಗಜಾನನ ಮೂರ್ತಿ ತಯಾರಿಸಿ ಮಾರಾಟ ಮಾಡುವುದಕ್ಕೂ ಬ್ರೇಕ್ ಬಿದ್ದಿದೆ.
ಅದೆಷ್ಟೊ ಜನರು ಕೊರೊನಾ ಭೀತಿಯ ನಡುವೆ ಸಭೆ ಸಮಾರಂಭ, ಹಬ್ಬ ಹರಿದಿನಗಳ ಆಚರಣೆ ನಿಲ್ಲಿಸಿದ್ದಾರೆ. ಗಣಪತಿ ಹಬ್ಬದ ಆರು ತಿಂಗಳ ಮುಂಚೆಯೆ ಮೂರ್ತಿ ತಯಾರಿಕೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದ ಕಲಾವಿದರು, ಈ ಬಾರಿಯ ಹಬ್ಬಕ್ಕೆ 15 ದಿವಸವಿದ್ದರೂ, ಗಣಪತಿ ಮೂರ್ತಿಗಳು ಮಾತ್ರ ಬೆರಳಿಕೆಯಷ್ಟಿವೆ.
ಕಳೆದ ವರ್ಷ ಮೂರು ಸಾವಿರಕ್ಕೂ ಹೆಚ್ಚು ಗಣಪತಿ ತಯಾರಿಸಿ ಮಾರಾಟ ಮಾಡಿದ್ದು, ಈಗ ಕೊರೋನಾ ಎಲ್ಲದಕ್ಕೂ ಅಡ್ಡಗಾಲು ಹಾಕಿದೆ. ಮೂರ್ತಿಗಳು ಮಾರಾಟವಾಗದೆ ಉಳಿದರೆ, ಹಾನಿ ಆಗಲಿದೆ. ಆದ್ದರಿಂದ ಸ್ವಲ್ಪ ಮೂರ್ತಿಗಳನ್ನು ತಯಾರಿಸಿದ್ದಾಗಿ ತಿಳಿಸುತ್ತಾರೆ ಕಲಾವಿದರು.

ವರ್ಷವೀಡಿ ಮನೆಯಲ್ಲಿದ್ದರೂ, ಗಣೇಶ ಹಬ್ಬದಲ್ಲಿ ವರ್ಷದ ದುಡಿಮೆ ಕಾಣುತ್ತಿದ್ದೇವು. ಆದರೆ, ಈ ವರ್ಷ ಕೊರೋನಾ ಬಂದಿದ್ದರಿoದ ಹೊರಗಡೆ ಮೂರ್ತಿ ಮಾರಾಟಕ್ಕೆ ಅವಕಾಶವಿಲ್ಲ. ಹೀಗಾಗಿ ಮನೆಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಮೂರ್ತಿ ತಯಾರಿಸಿದ್ದು, ಮುಂಗಡ ಹಣ ಕೊಟ್ಟವರಿಗೆ ಮಾತ್ರ ಮೂರ್ತಿ ತಯಾರಿಸಿದ್ದೇವೆ.
ಮಹೇಶ ಬಡಿಗೇರ. ಗಣೇಶ ತಯಾರಕ

ಹಬ್ಬಗಳು ಹಿಂದೂ ಸಂಸ್ಕೃತಿಯ ಪ್ರತೀಕ. ತಲತಲಾಂತರದಿoದ ನಮ್ಮ ಹಿರಿಯರು ನಡೆಸಿಕೊಂಡ ಬಂದ ಆಚರಣೆಗಳು ಬಿಡುವುದು ಅಸಾಧ್ಯ. ಪ್ರಸಕ್ತ ಕೊರೋನಾ ಮಧ್ಯೆಯೇ ಅಗತ್ಯ ಮುನ್ನಚ್ಚರಿಕೆ ಕ್ರಮಗಳೊಂದಿಗೆ ಗಣೇಶ ಹಬ್ಬಕ್ಕೆ ತಯಾರಿ ನೆಡೆಸಿದ್ದೇವೆ. ಜನರು ಸಾಮಾಜಿಕ ಅಂತರ ಕಾಯುವಿಕೆ, ಮಾಸ್ಕ್ ಕಡ್ಡಾಯ ಧರಿಸಬೇಕು.
ಪ್ರಭುಗೌಡ ಪಾಟೀಲ, ಸ್ಥಳೀಯ

Latest Posts

ರಾಜ್ಯಸಭೆಯಲ್ಲಿ ವಿದೇಶಿ ದೇಣಿಗೆ (ನಿಯಂತ್ರಣ) ತಿದ್ದುಪಡಿ ಮಸೂದೆ ಅಂಗೀಕಾರ

ಹೊಸದಿಲ್ಲಿ: ವಿದೇಶಿ ದೇಣಿಗೆ (ನಿಯಂತ್ರಣ) ತಿದ್ದುಪಡಿ ಮಸೂದೆ 2020 ಅನ್ನು ಇಂದು ಗೃಹ ವ್ಯವಹಾರಗಳ ಇಲಾಖೆಯ ರಾಜ್ಯ ಸಚಿವ ನಿತ್ಯಾನಂದ ರೈ ಸದನದಲ್ಲಿ ಮಂಡಿಸಿದ್ದು, ರಾಜ್ಯಸಭೆಯ ಅನುಮೋದನೆ ದೊರೆತಿದೆ. ಈ ಕುರಿತು ಮಾತನಾಡಿದ ಅವರು,...

ಕೋವಿಡ್-19 : ಕೊಡಗು ಜಿಲ್ಲೆಯಲ್ಲಿ ಬುಧವಾರ 46 ಹೊಸ ಪ್ರಕರಣ ದೃಢ

ಕೊಡಗು: ಕೊಡಗು ಜಿಲ್ಲೆಯಲ್ಲಿ ಹತ್ತು ಮಂದಿ ಪೊಲೀಸ್ ಸಿಬ್ಬಂದಿ ಸಹಿತ ಬುಧವಾರ ಬೆಳಗ್ಗೆ 31 ಮತ್ತು ಮಧ್ಯಾಹ್ನ 15 ಸೇರಿದಂತೆ ಒಟ್ಟು 46 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿವೆ ಎಂದು ಜಿಲ್ಲಾಧಿಕಾರಿ ಅನೀಸ್...

ಮೃಗಾಲಯ ಪ್ರಾಣಿಗಳ ದತ್ತು ಸ್ವೀಕಾರ

ಮೈಸೂರು: ಮೈಸೂರು ಮೃಗಾಲಯದ ಪ್ರಾಣಿಗಳ ದತ್ತು ಸ್ವೀಕಾರ ಯೋಜನೆ ಅಡಿಯಲ್ಲಿ ಬೆಂಗಳೂರಿನ ಮೆ.ಕುಮಾರ್ ಆರ್ಗಾನಿಕ್ ಪ್ರೊಡಕ್ಸ್ ವತಿಯಿಂದ 1 ಲಕ್ಷ ರೂ. ಪಾವತಿಸಿ ‘ಮಾನ್ಯ’ ಎಂಬ ಹೆಣ್ಣು ಹುಲಿಯನ್ನು 25-08-2020 ರಿಂದ 24-08-2021...

ಐಪಿಎಲ್ ಉದ್ಘಾಟನಾ ಪಂದ್ಯ ವೀಕ್ಷಿಸಿದ್ರು ಬರೋಬ್ಬರಿ 20 ಕೋಟಿ ಜನ!

ದುಬೈ: ಪ್ರಸ್ತುತ ಸಾಲಿನ ಐಪಿಎಲ್ ಉದ್ಘಾಟನಾ ಪಂದ್ಯ ವೀಕ್ಷಿಸಿದವರ ಸಂಖ್ಯೆ ೨೦ ಕೋಟಿ. ಮುಂಬೈ ಇಂಡಿಯ ಹಾಗೂ ಚೆನೈ ನಡುವೆ ಟೂರ್ನಿಯ ಉದ್ಘಾಟನಾ ಪಂದ್ಯ ನಡೆದಿತ್ತು. ಉದ್ಘಾಟನಾ ಪಂದ್ಯ ಕ್ರಿಕೆಟ ಮಾತ್ರವಲ್ಲ ಇತರ ಎ...

Don't Miss

ರಾಜ್ಯಸಭೆಯಲ್ಲಿ ವಿದೇಶಿ ದೇಣಿಗೆ (ನಿಯಂತ್ರಣ) ತಿದ್ದುಪಡಿ ಮಸೂದೆ ಅಂಗೀಕಾರ

ಹೊಸದಿಲ್ಲಿ: ವಿದೇಶಿ ದೇಣಿಗೆ (ನಿಯಂತ್ರಣ) ತಿದ್ದುಪಡಿ ಮಸೂದೆ 2020 ಅನ್ನು ಇಂದು ಗೃಹ ವ್ಯವಹಾರಗಳ ಇಲಾಖೆಯ ರಾಜ್ಯ ಸಚಿವ ನಿತ್ಯಾನಂದ ರೈ ಸದನದಲ್ಲಿ ಮಂಡಿಸಿದ್ದು, ರಾಜ್ಯಸಭೆಯ ಅನುಮೋದನೆ ದೊರೆತಿದೆ. ಈ ಕುರಿತು ಮಾತನಾಡಿದ ಅವರು,...

ಕೋವಿಡ್-19 : ಕೊಡಗು ಜಿಲ್ಲೆಯಲ್ಲಿ ಬುಧವಾರ 46 ಹೊಸ ಪ್ರಕರಣ ದೃಢ

ಕೊಡಗು: ಕೊಡಗು ಜಿಲ್ಲೆಯಲ್ಲಿ ಹತ್ತು ಮಂದಿ ಪೊಲೀಸ್ ಸಿಬ್ಬಂದಿ ಸಹಿತ ಬುಧವಾರ ಬೆಳಗ್ಗೆ 31 ಮತ್ತು ಮಧ್ಯಾಹ್ನ 15 ಸೇರಿದಂತೆ ಒಟ್ಟು 46 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿವೆ ಎಂದು ಜಿಲ್ಲಾಧಿಕಾರಿ ಅನೀಸ್...

ಮೃಗಾಲಯ ಪ್ರಾಣಿಗಳ ದತ್ತು ಸ್ವೀಕಾರ

ಮೈಸೂರು: ಮೈಸೂರು ಮೃಗಾಲಯದ ಪ್ರಾಣಿಗಳ ದತ್ತು ಸ್ವೀಕಾರ ಯೋಜನೆ ಅಡಿಯಲ್ಲಿ ಬೆಂಗಳೂರಿನ ಮೆ.ಕುಮಾರ್ ಆರ್ಗಾನಿಕ್ ಪ್ರೊಡಕ್ಸ್ ವತಿಯಿಂದ 1 ಲಕ್ಷ ರೂ. ಪಾವತಿಸಿ ‘ಮಾನ್ಯ’ ಎಂಬ ಹೆಣ್ಣು ಹುಲಿಯನ್ನು 25-08-2020 ರಿಂದ 24-08-2021...
error: Content is protected !!