Wednesday, August 17, 2022

Latest Posts

ವಿಜಯನಗರ ನೂತನ ಜಿಲ್ಲೆ ‌ಶೀಘ್ರದಲ್ಲೇ ಘೋಷಣೆ: ಉಸ್ತುವಾರಿ ಸಚಿವ ಆನಂದ್ ಸಿಂಗ್

ಬಳ್ಳಾರಿ: ವಿಜಯನಗರ ನೂತನ ಜಿಲ್ಲೆ ಕಳೆದ ಏಪ್ರಿಲ್​ ತಿಂಗಳಲ್ಲಿಯೇ ಘೋಷಣೆಯಾಗಬೇಕಿತ್ತು. ಆದರೆ, ನೋವೆಲ್ ಕೊರೊನಾದಿಂದ ವಿಳಂಬವಾಗಿದೆ. ‌ಶೀಘ್ರದಲ್ಲೇ ಘೋಷಣೆಯಾಗುವ ಸಾಧ್ಯತೆಯಿದೆ ಎಂದು ಅರಣ್ಯ, ಪರಿಸರ, ಜೀವಶಾಸ್ತ್ರ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರು ಹೇಳಿದರು.
ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ಕಳೆದ ಮಾರ್ಚ್​ ತಿಂಗಳಲ್ಲಿ ನೂತನ ಜಿಲ್ಲೆ ರಚನೆ ಕುರಿತು ಚರ್ಚೆ ಮಾಡಲಾಗಿತ್ತು. ಆದರೆ, ಕೋವಿಡ್​ನಿಂದಾಗಿ ವಿಜಯನಗರ ಪ್ರತ್ಯೇಕ ಜಿಲ್ಲೆ ಘೋಷಣೆ ವಿಳಂಬವಾಗಿದೆ. ವಿಶ್ವ ವಿಖ್ಯಾತ ಹಂಪಿ ಶ್ರೀ ವಿರೂಪಾಕ್ಷೇಶ್ವರನ ಹಾಗೂ ವಿಜಯನಗರ ಕ್ಷೇತ್ರದ ಜನರ ಬೇಡಿಕೆ ಹುಸಿಯಾಗೋಲ್ಲ ಎಂದರು.
ವಿಜಯನಗರ ಪ್ರತ್ಯೇಕ ಜಿಲ್ಲೆ ರಚನೆಗೆ ಸಂಬಂಧಿಸಿದಂತೆ ಬಳ್ಳಾರಿ ನಗರ ಶಾಸಕ ಸೋಮಶೇಖರ ರೆಡ್ಡಿ ಅಣ್ಣನ ಆಶೀರ್ವಾದ ಬೇಕು ಎಂದು ಹಾಸ್ಯದಿಂದ ಹೇಳಿದ್ದೇನೆ.‌ ಅವರು ನನಗೆ ಅಣ್ಣನ ಸಮಾನ. ಎಲ್ಲರ ವಿಶ್ವಾಸ, ಸಹಕಾರ ತೆಗೆದುಕೊಂಡೇ ಜಿಲ್ಲೆ ರಚನೆ‌ ಮಾಡಲಾಗುವುದು. ಯಾರನ್ನೂ ವಿರೋಧ ಹಾಗೂ ಕೆಳಮಟ್ಟದಿಂದ ನೋಡುವ‌ ಜಾಯಮಾನ ನನ್ನದಲ್ಲ.‌ ಎಲ್ಲರನ್ನೂ ಸಮಾನವಾಗಿ ಕಾಣುವ ಗುಣ ನನ್ನದು, ಎಲ್ಲರನ್ನೂ ಗೌರವದಿಂದ ಕಾಣುವೆ, ನನಗೆ ಕ್ಷೇತ್ರದ ಅಭಿವೃದ್ಧಿ ಹಾಗೂ ಜನರು ಮುಖ್ಯ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!