Sunday, August 14, 2022

Latest Posts

ವಿಜಯಪುರ| ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ನಾಲ್ವರು ಗುಣಮುಖ, ಆಸ್ಪತ್ರೆಯಿಂದ ಬಿಡುಗಡೆ

ವಿಜಯಪುರ: ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ನಾಲ್ವರು ಗುಣಮುಖಗೊಂಡು ನಗರದ ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ ಗುರುವಾರ ಬಿಡುಗಡೆಗೊಂಡಿದ್ದು, ಇಲ್ಲಿವರೆಗೆ 41 ಜನರು ಗುಣಮುಖಗೊಂಡಿದ್ದಾರೆ.
ರೋಗಿ ಸಂಖ್ಯೆ 275ರ 38 ವರ್ಷದ ಮಹಿಳೆ, ರೋಗಿ ಸಂಖ್ಯೆ 538ರ 33 ವರ್ಷದ ಮಹಿಳೆ, ರೋಗಿ ಸಂಖ್ಯೆ 769ರ 11 ವರ್ಷದ ಬಾಲಕಿ ಹಾಗೂ ರೋಗಿ ಸಂಖ್ಯೆ 510ರ 45 ವರ್ಷದ ಪುರುಷ ಸೋಂಕಿನಿಂದ ಗುಣಮುಖಗೊಂಡು ಬಿಡುಗಡೆಯಾಗಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ ಒಟ್ಟು 61 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಇದರಲ್ಲಿ 41 ಜನರು ಗುಣಮುಖರಾಗಿ ಜಿಲ್ಲಾಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇನ್ನುಳಿದ 16 ಕೋವಿಡ್ ಸೋಂಕಿತ ರೋಗಿಗಳು ಸಕ್ರಿಯ ರೋಗಿಗಳಾಗಿದ್ದು, ಪರಿಣಾಮಕಾರಿಯಾದ ಚಿಕಿತ್ಸೆಯನ್ನು ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹೇಳಿದರು.
ಜಿಲ್ಲೆಯಲ್ಲಿ ಈವರೆಗೆ ವಿದೇಶ ಸೇರಿದಂತೆ ಇತರ ಪ್ರದೇಶಗಳಿಂದ 5073 ಜನರು ಬಂದ ಬಗ್ಗೆ ವರದಿಯಾಗಿದ್ದು, ಇವರ ಮೇಲೆ ತೀವ್ರ ನಿಗಾ ಇಡಲಾಗಿದೆ. 1705 ಜನರು 28 ದಿನಗಳ ಐಸೋಲೇಶನ್ ಅವಧಿ ಪೂರ್ಣಗೊಳಿಸಿದ್ದಾರೆ. 3327 ಜನರು (1 ರಿಂದ 28 ದಿನಗಳ) ರಿರ್ಪೋಟಿಂಗ್ ಅವಧಿಯಲ್ಲಿದ್ದು, ಈವರೆಗೆ ಒಟ್ಟು 4 ಜನ ಕೋವಿಡ್-19 ರೋಗಿಗಳು ಮೃತಪಟ್ಟಿದ್ದಾರೆ. 5595 ಜನರ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿದ್ದು, 3224 ಜನರ ನೆಗೆಟಿವ್ ವರದಿ ಬಂದಿದೆ. ಇನ್ನೂ 2310 ಜನರ ಗಂಟಲು ದ್ರವ ಮಾದರಿ ಪರೀಕ್ಷಾ ವರದಿ ಬರಬೇಕಾಗಿದೆ ಎಂದು ಹೇಳಿದರು. ಈ ಸಂದರ್ಭ ಡಾ.ಎಸ್.ಎ. ಕಟ್ಟಿ, ಡಾ. ಲಕ್ಕಣ್ಣವರ, ಡಾ.ಇಂಗಳೆ, ಡಾ.ಎ.ಜಿ. ಬಿರಾದಾರ, ಡಾ. ಸುಮಾ ಮಮದಾಪುರ, ಡಾ. ಚನ್ನಮ್ಮ, ಡಾ. ಜಾಧವ, ಡಾ. ಝಳಕಿ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss