ವಿಜಯಪುರ: ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದಲ್ಲಿ ಬುಧವಾರ ರಾತ್ರಿ ಸುರಿದ ಭಾರಿ ಮಳೆ, ಗಾಳಿಗೆ ಬಾಳೆ ನಾಶವಾಗಿದೆ
ನಾಲತವಾಡ ಪಟ್ಟಣದ ರೆವಣಪ್ಪ ಕಂಭಾವಿ, ಮಡಿವಾಳಪ್ಪ ಕೆಂಬಾವಿ, ಅಡಿವೆಪ್ಪ ಕೆಂಭಾವಿ, ಶಂಕ್ರಪ್ಪ ಕೆಂಭಾವಿ, ನಾಗಪ್ಪ ಕೆಂಬಾವಿ, ತಿಪ್ಪಣ್ಣ ಕೆಂಭಾವಿ ಎಂಬ ರೈತರ ತೋಟದ ಬಾಳೆ ನೆಲಕ್ಕೆ ಉರುಳಿದೆ. ಈ ರೈತರ ಬಾಳೆ ಅಂದಾಜು 2000 ಗಿಡಗಳು ನೆಲಕ್ಕೆ ಉರುಳಿದೆ.
ಮೊದಲೆ ಕೊರೋನಾದಿಂದ ಲಾಕ್ ಡೌನ ಆಗಿ ಬಾಳೆ ಬೆಳೆಗಾರರಿಗೆ ಮಾರುಕಟ್ಟೆ ಇಲ್ಲದೆ ರೈತರು ಸಂಕಷ್ಟ ಅನುಭವಿಸಿದ್ದರು. ಬಾಳೆ ಮಾರಾಟವಾಗದೇ 10 ರೂಪಾಯಿ ಡಜನ್ ಮಾರಾಟ ಮಾಡಿದ್ದರು. ಗಾಯದ ಮೇಲೆ ಬರೆ ಎಂಬಂತೆ ಈಗ ಭಾರಿ ಮಳೆ ಗಾಳಿಗೆ ಬಾಳೆ ಗಿಡ ನೆಲಕ್ಕೆ ಉರುಳಿ ರೈತರಿಗೆ ಮತ್ತಷ್ಟು ಸಂಕಷ್ಟ ತಂದಿಟ್ಟಿದೆ.
ರೈತರ ಲಕ್ಷಾಂತರ ರೂಪಾಯಿ ಬೆಲೆಯ ಬಾಳೆ ನೆಲಕ್ಕಚ್ಚಿದ್ದರಿಂದ ಕಂಗಾಲಾಗಿದ್ದಾರೆ. ಸರಕಾರಕ್ಕೆ ಪರಿಹಾರಕ್ಕಾಗಿ ಮೊರೆ ಇಟ್ಟಿದ್ದಾರೆ.
ಸ್ಥಳಕ್ಕೆ ತೋಟಗಾರಿಗೆ ಅಧಿಕಾರಿ ಹಾಗೂ ಕಂದಾಯ ಇಲಾಖೆ ಅಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.