Sunday, June 26, 2022

Latest Posts

ವಿಜಯಪುರದಲ್ಲಿ ಹೆಚ್ಚಿದ ಆತಂಕ: ಸಾವಿರ ಗಡಿ ದಾಟಿದ ಸೋಂಕಿತರ ಸಂಖ್ಯೆ

ವಿಜಯಪುರ : ಕೊರೋನಾ ತನ್ನ ಅಟ್ಟಹಾಸವನ್ನೂ‌ ಎಲ್ಲಿಯೂ ಕಡಿಮೆ ಮಾಡಿಲ್ಲ. ಎಲ್ಲೆಡೆ ಹೆಚ್ಚಿದುತ್ತಲೇ ಇದೆ. ವಿಜಯಪುರದಲ್ಲಿ ಕೊರೋನಾ ರಣ ಕೇಕೆ ಪ್ರಾರಂಭವಾಗಿದೆ. ಎಲ್ಲಿ ಹೋದರೂ‌ ಕೊರೋನಾ ಕೇಸ್. ಅಲ್ಲಿನ ಜನ ಅಕ್ಷರ‌ಸಹ ‌ನಡುಗುತ್ತಿದ್ದಾರೆ. ಸಾವಿರ ಗಡಿ ದಾಟಿದೆ ಕೊರೋನಾ

ಈಗ ಮತ್ತೆ 22 ಜನ ಪೊಲೀಸರು, 10 ಜನ ಆರೋಗ್ಯ ಇಲಾಖೆ ಸಿಬ್ಬಂದಿಗಳು, 7 ಜನ ಕೈದಿಗಳು, ಮಹಾನಗರ ಪಾಲಿಕೆಯ 6 ಜನ ಸಿಬ್ಬಂದಿ, ವಿಜಯಪುರ ನಗರದ ಎಸ್ ಬಿ ಐ ಬ್ಯಾಂಕಿನ ಇಬ್ಬರು ಸಿಬ್ಬಂದಿಗೂ ಕೊರೊನಾ ವಕ್ಕರಿಸಿದೆ. ಪರಿಣಾಮ ಈಗ ನಾನಾ ಪೊಲೀಸ್ ಠಾಣೆಗಳು, ಮಹಾನಗರ ಪಾಲಿಕೆ, ಎಸ್ ಬಿ ಐ ಬ್ಯಾಂಕ್, ಆರೋಗ್ಯ ಇಲಾಖೆ ಕಚೇರಿಗಳನ್ನು ಸೀಲ್​ಡೌನ್ ಮಾಡಲಾಗಿದ್ದು, ಡಿಸ್‌ಇನ್​ಫೆಕ್ಷನ್ ಮಾಡಲಾಗುತ್ತಿದೆ.

ಈ ಮಧ್ಯೆ ಕೊರೋನಾ ಸೋಂಕಿನ ಜೊತೆಗೆ ಅದರ ಬಗ್ಗೆ ಇರುವ ಭಯವೂ ಹೆಚ್ಚಾಗುತ್ತಿದೆ. ಈ ಭಯದಿಂದ ಕೆಲವರು ಆಘಾತಗೊಂಡು ಸಾವಿಗೀಡಾದರೆ ಮತ್ತೆ ಕೆಲವರು ಆತ್ಮಹತ್ಯೆಗೂ ಶರಣಾಗಿದ್ದಾರೆ. ವಿಜಯಪುರ ನಗರದ ಜೋರಾಪುರ ಪೇಟೆಯ ಶ್ಯಾಪೇಟಿ ಗಲ್ಲಿಯಲ್ಲಿ 55 ವರ್ಷದ ವ್ಯಕ್ತಿಯೊಬ್ಬ ಅನಾರೋಗ್ಯದ ಹಿನ್ನೆಲೆಯಲ್ಲಿ ವಿಜಯಪುರ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ. ಇಲ್ಲಿ ಚಿಕಿತ್ಸೆ ನೀಡಿದ ವೈದ್ಯರು, ಕೊರೋನಾ ಲಕ್ಷಣಗಳಿರುವ ಹಿನ್ನೆಲೆಯಲ್ಲಿ ಕೊರೋನಾ ಚಿಕಿತ್ಸೆ ನೀಡುವ ಆಸ್ಪತ್ರೆಗೆ ದಾಖಲಾಗುವಂತೆ ಸೂಚನೆ ನೀಡಿದ್ದರು. ಬುಧವಾರ ರಾತ್ರಿ ಮನೆಗೆ ಬಂದಿದ್ದ ಈತ ಗುರುವಾರ ನಸುಕಿನ ಜಾವ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಘಟನೆ ಜನರಲ್ಲಿ ಕೊರೋನಾ ಬಗ್ಗೆ ಇರುವ ಅತೀ ಭಯಕ್ಕೆ ಸಾಕ್ಷಿಯಾಗಿದೆ. ಇನ್ನು ಮುಂದಾದರೂ ಸರಕಾರ ಕೊರನಾ ನಿಯಂತ್ರಣಕ್ಕೆ ಕೈಗೊಳ್ಳುತ್ತಿರುವ ಕ್ರಮಗಳ ಜೊತೆಯಲ್ಲಿಯೇ ಜನರಲ್ಲಿರುವ ಕೊನಾ ಭಯ ಹೋಗಲಾಡಿಸಲು ಕ್ರಮ ಕೈಗೊಳ್ಳಬೇಕಿರುವುದು ತುರ್ತು ಅಗತ್ಯವಾಗಿದೆ. ಇಲ್ಲದಿದ್ದರೆ ಕೊರೊನಾ ಬಗ್ಗೆ ಇರುವ ಭಯ ಮತ್ತಷ್ಟು ಆಘಾತಗಳಿಗೆ ಕಾರಣವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss