ವಿಜಯಪುರ: ನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಎಸ್ಪಿ ಡಾ. ರಾಮ ಅರಸಿದ್ಧಿಗೆ ಬೈಕ್ ಸವಾರ ಜೋರಾಗಿ ಡಿಕ್ಕಿ ಹೊಡೆದಿದ್ದಾನೆ. ಇಲ್ಲಿನ ಕಾಮತ ಹೊಟೇಲ್ ಬಳಿ ವಾಹನ ತಪಾಸಣೆ ಸಂದರ್ಭದಲ್ಲಿ ಜೋರಾಗಿ ಬಂದು ಬೈಕ್ ಸವಾರ ಡಿಕ್ಕಿ ಹೊಡೆದ ಪರಿಣಾಮ ನಗರದ ಖಾಸಗಿ ಆಸ್ಪತ್ರೆಗೆ ASPನ್ನು ದಾಖಲು ಮಾಡಲಾಗಿದೆ.
ಮುಖಕ್ಕೆ ಎರಡು ಕಡೆ ಪೆಟ್ಟಾಗಿದ್ದು ಚಿಕಿತ್ಸೆ ಮಾಡಲಾಗುತ್ತಿದೆ ಎಂದು SP ಅನುಪಮ ಅಗರವಾಲ ದೂರವಾಣಿ ಮೂಲಕ ಮಾಹಿತಿ ನೀಡಿದ್ದು, ಅಪಘಾತ ಸುದ್ದಿ ತಿಳಿಯುತ್ತಲೇ ಆಸ್ಪತ್ರೆಗೆ ವಿಜಯಪುರ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, SP ಅನುಪಮ ಅಗರವಾರ, ಇತರ ಹಿರಿಯ ಅಧಿಕಾರಿಗಳು ದೌಡಾಯಿಸಿದ್ದಾರೆ.