ವಿಜಯಪುರ: ಜಿಲ್ಲೆಯ ಕೋಲಾರ ತಾಲೂಕಿನ ಮಸೂತಿ ಗ್ರಾಮದಲ್ಲಿ ಸೋಮವಾರ ರಾತ್ರಿ ಭಾರಿ ಪ್ರಮಾಣದ ಸದ್ದು ಕೇಳಿ ಬಂದಿದ್ದು, ಅಲ್ಪಸ್ವಲ್ಪ ಭೂ ಕಂಪನವಾದ ಅನುಭವ ಗ್ರಾಮಸ್ಥರಿಗೆ ಆಗಿದೆ.
ಸೋಮವಾರ ರಾತ್ರಿ 9 ರಿಂದ 9.30 ರ ನಡುವೆ ಮೂರು ಬಾರಿ ಭೂಮಿ ಕಂಪನ ಅನುಭವವಾಗಿದ್ದು,
ಇದರ ಜತೆಗೆ ಭಾರಿ ಪ್ರಮಾಣದ ಸದ್ದು ಕೂಡ ಕೇಳಿ ಬಂದಿದ್ದು, ಮನೆಗಳಲ್ಲಿನ ಸಾಮಗ್ರಿಗಳು ಕೆಳ ಬಿದ್ದಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಇದರಿಂದ ಬೆಚ್ಚಿ ಬಿದ್ದ ಗ್ರಾಮಸ್ಥರು ಕೆಲಕಾಲ ಮನೆಯಿಂದ ಹೊರ ಬಂದು, ಆತಂಕಗೊಳ್ಳುವಂತಾಗಿದೆ.
ಕಳೆದ ಒಂದು ವಾರದ ಹಿಂದೆ ಸಹ ಮಸೂತಿ ಗ್ರಾಮ ಪಕ್ಕದ ಮಲಘಾಣ, ಕೂಡಗಿ ಗ್ರಾಮದಲ್ಲಿಯೂ ಕೂಡ ಇದೆ ರೀತಿಯಲ್ಲಿ ಸ್ಫೋಟ ಮತ್ತು ಭೂಮಿ ಕಂಪಿಸಿರುವ ಅನುಭವ ಇಲ್ಲಿನ ಗ್ರಾಮಸ್ಥರಿಗೆ ಆಗಿತ್ತು, ಇದರಿಂದ ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ.