ವಿಜಯಪುರ: ಜಿಲ್ಲೆಯ ಸಿಂದಗಿ ತಾಲೂಕಿನ ಗ್ರಾಮವೊಂದರಲ್ಲಿ ಅಂಧ ಯುವಕನ ಜೊತೆ ಅಪ್ರಾಪ್ತೆಯೊಬ್ಬಳನ್ನು ಮದುವೆ ಮಾಡಲು ನಿಶ್ಚಯಿಸಿರುವ ಖಚಿತ ಮಾಹಿತಿ ಮೇರೆಗೆ, ಮಕ್ಕಳ ಸಹಾಯವಾಣಿ ತಂಡ ಬಾಲಕಿಯ ಪಾಲಕರನ್ನು ಭೇಟಿ ಮಾಡಿ ತಿಳಿವಳಿಕೆ ಹೇಳಿ, ಮದುವೆ ತಡೆದು, ಬಾಲಕಿಯನ್ನು ರಕ್ಷಿಸಿದ್ದಾರೆ.
ಅಪ್ರಾಪ್ತೆಯೊಬ್ಬಳನ್ನು ಕಲಬುರಗಿ ಜಿಲ್ಲೆಯ ಅಫ್ಜಲಪುರ ತಾಲೂಕಿನ ಮಾಶ್ಯಾಳ ಗ್ರಾಮದ ಅಂಧ ಯುವಕನಿಗೆ 5 ಎಕರೆ ಭೂಮಿ ಇದೆ ಎನ್ನುವ ಕಾರಣಕ್ಕೆ, ಮದುವೆ ಮಾಡಲು ನಿಶ್ಚಯಿಸಲಾಗಿತ್ತು. ಈ ವಿಷಯವನ್ನು ಮಕ್ಕಳ ಸಹಾಯವಾಣಿ- 1098ಕ್ಕೆ ಸಾರ್ವಜನಿಕರು ತಿಳಿಸಿದ ಹಿನ್ನೆಲೆ, ಮಕ್ಕಳ ಸಹಾಯವಾಣಿ ತಂಡ, ಅಪ್ರಾಪ್ತೆ ಕುಟುಂಬದವರು ಹಾಗೂ ಸಮಾಜದ ಹಿರಿಯರನ್ನು ಭೇಟಿಯಾಗಿ, ಬಾಲಕಿಗೆ 18 ವರ್ಷ ಆಗುವವರೆಗೆ ಮದುವೆ ಮಾಡುವಂತಿಲ್ಲ. ಇದು ಬಾಲ್ಯ ವಿವಾಹ ಕಾಯ್ದೆ ಉಲ್ಲಂಘನೆಯಾಗುತ್ತಿದ್ದು, ಪಾಲಕರಿಗೆ ಶಿಕ್ಷೆಯಾಗುತ್ತದೆ ಎಂದು ತಿಳಿವಳಿಕೆ ಹೇಳಿ, ನಿಶ್ಚಿಯಿಸಿದ ಮದುವೆಯನ್ನು ಮುಂದೂಡಿಸಿದ್ದಾರೆ. ಅಪ್ರಾಪ್ತೆಗೆ ಮದುವೆ ಮಾಡದಂತೆ ಪಾಲಕರು ಹಾಗೂ ಮುಖಂಡರಿಂದ ಮುಚ್ಚಳಿಕೆ ಪತ್ರ ಬರೆಸಿಕೊಂಡು, ಬಾಲಕಿಯನ್ನು ರಕ್ಷಿಸಿದ್ದಾರೆ.