Monday, July 4, 2022

Latest Posts

ವಿಜಯಪುರ | ಅಬಕಾರಿ ದಾಳಿ, 13 ಲಕ್ಷ ಮೌಲ್ಯದ 130 ಕೆಜಿ ಹಸಿ ಗಾಂಜಾ ಜಪ್ತಿ

ವಿಜಯಪುರ: ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಾಖಂಡಕಿ ಗ್ರಾಮದ ಜಮೀನೊಂದರ ಕಬ್ಬಿನ ಪಡದಲ್ಲಿ ಅಕ್ರಮವಾಗಿ ಬೆಳೆದಿದ್ದ, 13 ಲಕ್ಷ ಮೌಲ್ಯದ 130 ಕೆಜಿ ಹಸಿ ಗಾಂಜಾವನ್ನು ಅಬಕಾರಿ ಪೊಲೀಸರು ಶುಕ್ರವಾರ ಸಂಜೆ ಜಪ್ತಿ ಮಾಡಿದ್ದಾರೆ.
ಆರೋಪಿಗಳಾದ ಮಹಾದೇವ ಸಂಗಪ್ಪ ನೀಲಜಗಿ ಹಾಗೂ ಜಮೀನಿನ ಮಾಲೀಕ ಗಂಗಪ್ಪ ಸಂಗಪ್ಪ ನೀಲಜಗಿ ಇವರಿಬ್ಬರು ಪರಾರಿಯಾಗಿದ್ದು, ಇವರಿಬ್ಬರ ವಿರುದ್ಧ ಎನ್ ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಅಬಕಾರಿ ಜಂಟಿ ಆಯುಕ್ತ ಡಾ.ವೈ. ಮಂಜುನಾಥ, ಅಬಕಾರಿ ಉಪ ಆಯುಕ್ತ ಕೆ. ಅರುಣಕುಮಾರ ಹಾಗೂ ಅಬಕಾರಿ ಅಧೀಕ್ಷಕ ಶಿವಲಿಂಗಪ್ಪ ಬನಹಟ್ಟಿ ಮಾರ್ಗದರ್ಶನದಲ್ಲಿ ಅಬಕಾರಿ ಉಪ ಅಧೀಕ್ಷಕ ಎಸ್.ಎಚ್. ವಜ್ಜರಮಟ್ಟಿ, ಅಬಕಾರಿ ನಿರೀಕ್ಷಕ ಮಹಾದೇವ ಪೂಜಾರಿ ಹಾಗೂ ಸಿಬ್ಬಂದಿ ತಂಡ ದಾಳಿ ನಡೆಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss