Monday, August 8, 2022

Latest Posts

ವಿಜಯಪುರ| ಅಯೋಧ್ಯೆ ಶ್ರೀರಾಮ ಮಂದಿರ ಶೈಲಿಯಲ್ಲಿ ಚಿಕ್ಕ ರಾಮಮಂದಿರಕ್ಕೆ ಭೂಮಿ ಪೂಜೆ

ವಿಜಯಪುರ: ಜಿಲ್ಲೆಯ ಕೊಲ್ಹಾರ ಪಟ್ಟಣ ಹೊರ ವಲಯದಲ್ಲಿರುವ ಬೆಳ್ಳುಬ್ಬಿ ಲೇಔಟ್‌ನಲ್ಲಿ ಅಯೋಧ್ಯೆ ಶ್ರೀರಾಮ ಮಂದಿರ ಶೈಲಿಯಲ್ಲಿ ಚಿಕ್ಕ ರಾಮ ಮಂದಿರಕ್ಕೆ ಬುಧವಾರ ಭೂಮಿ ಪೂಜೆ ಮತ್ತು ರಾಮ ಮಂದಿರದ ಕರಸೇವಕರಿಗೆ ಸನ್ಮಾನ ಕಾರ್ಯಕ್ರಮವನ್ನು ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ನೆರವೇರಿಸಿದರು.
ಈ ಸಂದರ್ಭ ಮಾತನಾಡಿದ ಅವರು, ನಮ್ಮೆಲ್ಲರ ಬಹುದಿನಗಳ ಕನಸು ಹಾಗೂ ಎಲ್ಲರ ಬಹುವರ್ಷದ ಹೋರಾಟ, ಸಾವಿರಾರು ಕರಸೇವಕರ ಬಲಿದಾನದ ಫಲವಾಗಿ 500 ವರ್ಷಗಳ ನಂತರ ಪ್ರಭು ಶ್ರೀರಾಮಚಂದ್ರ ಮಹಾರಾಜರ ಜನ್ಮಸ್ಥಳವಾದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾನಕ್ಕೆ ಭೂಮಿ ಪೂಜೆಯನ್ನು ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೊದಿಯವರು ನೆರವೆರಿಸುತ್ತಿದ್ದಾರೆ. ಅದೇ ಸಮಯಕ್ಕೆ ಸರಿಯಾಗಿ ನಾವುಗಳು ಇಲ್ಲಿ ರಾಮ ಮಂದಿರದ ಶೈಲಿಯಲ್ಲಿಯೇ ಸಣ್ಣದೊಂದು ಪ್ರಭು ಶ್ರೀರಾಮಚಂದ್ರ ಮಂದಿರವನ್ನು ನಿರ್ಮಿಸಲು ಸಂಕಲ್ಪ ಮಾಡುತ್ತಿದ್ದೇವೆ. ಹತ್ತು ಅವತಾರಗಳಲ್ಲಿ ಒಂದು ಅವತಾರವಾದ ಶ್ರೀರಾಮನ, ಭವ್ಯ ರಾಮ ಮಂದಿರ ನಿರ್ಮಾಣ ವಾಗುತ್ತಿದ್ದು, ಕರ್ನಾಟಕಕ್ಕೂ ಅಯೋಧ್ಯೆಗೂ ದೊಡ್ದ ಸಂಬಂಧವಿದೆ. ಕರ್ನಾಟಕದ ಕಿಷ್ಕಿಂದೆ (ಹಂಪಿ) ಯಲ್ಲಿ ಇರತಕ್ಕಂತಹ ವಾನರ ಮತ್ತು ಸುಗ್ರೀವ ರಾಜನ ಸಹಾಯವನ್ನು ಪಡೆದುಕೊಂಡು ರಾಮನ ಭಕ್ತ ಆಂಜನೇಯನ ಸಹಾಯದಿಂದ ಯುದ್ಧವನ್ನು ಗೆದ್ದ ಉದಾಹರಣೆ ಇದೆ ಎಂದರು. ಭೂಮಿ ಪೂಜೆಯ ಪೂರ್ವದಲ್ಲಿ ಪಟ್ಟಣದಲ್ಲಿರುವ ಆಂಜನೇಯ ಮತ್ತು ದ್ಯಾಮವ್ವದೇವಿ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದರು. 1992 ಡಿಸೆಂಬರ್ 6 ರಂದು ಅಯೋಧ್ಯೆಗೆ ತೆರಳಿ ಬಾಬ್ರಿ ಮಸೀದಿ ಧ್ವಂಸ ಗೊಳಿಸುವಲ್ಲಿ ಪಾತ್ರ ವಹಿಸಿದ್ದ ಕರಸೇವಕರಾದ ರಾಮಣ್ಣ ಬಾಟಿ, ಸಂಗಪ್ಪ ಚಿತ್ತಾಪುರ, ಬಸಪ್ಪ ಚೌಡಪ್ಪಗೊಳ, ವಿಜಯಕುಮಾರ್ ನಿಲವಾಣಿ, ಅಶೋಕ ಚೌಡಪ್ಪಗೋಳ ಸೇರಿದಂತೆ ದಿ.ರುದ್ರಪ್ಪ ಹುಲ್ಯಾಳ, ಪುಂಡಲಿಕ ಕರಣೆ ಇವರ ಪುತ್ರರಿಗೆ ಸನ್ಮಾನಿಸಲಾಯಿತು. ಶೀಲವಂತ ಹಿರೇಮಠದ ಕೈಲಾಸನಾಥ ಸ್ವಾಮೀಜಿ, ಹಿರೇಮಠದ ಪಡದಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರಾಜಶೇಖರ್ ಶೀಲವಂತ, ಮುರಿಗೆಪ್ಪ ಬೆಳ್ಳುಬ್ಬಿ, ಭೀಮಶಿ ಬೀಳಗಿ, ಮಲ್ಲು ಬೆಳ್ಳುಬ್ಬಿ, ನಾಮದೇವ ಪವಾರ, ಡೋಂಗ್ರಿ ಕಟಬರ, ಬಾಬುರಾವ ಬೆಳ್ಳುಬ್ಬಿ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss