Wednesday, August 10, 2022

Latest Posts

ವಿಜಯಪುರ| ಆಶ್ರಯ ಮನೆ ನಿರ್ಮಾಣಕ್ಕೆ ವಸತಿ ಸಚಿವ ವಿ. ಸೋಮಣ್ಣರಿಂದ ಶಂಕು ಸ್ಥಾಪನೆ

ಹೊಸದಿಗಂತ ವರದಿ, ವಿಜಯಪುರ:

ನಗರದ ಅಲ್ ಅಮೀನ್ ಮೆಡಿಕಲ್ ಕಾಲೇಜ್ ಹಿಂಭಾಗದ ಪ್ರದೇಶದಲ್ಲಿ ಪ್ರಧಾನ ಮಂತ್ರಿ ವಸತಿ ಆವಾಸ ಯೋಜನೆ ಅಡಿ ಮಂಜೂರಾದ ಆಶ್ರಯ ಮನೆಗಳ‌ ನಿರ್ಮಾಣ ಕಾರ್ಯದ ಶಂಕು ಸ್ಥಾಪನೆಯನ್ನು ವಸತಿ ಸಚಿವ ವಿ. ಸೋಮಣ್ಣ ಬುಧವಾರ ನೆರವೇರಿಸಿದರು.

ಈ ನಗರಕ್ಕೆ ಪ್ರಧಾನಿ ನರೇಂದ್ರ ಮೋದಿ ನಗರ ಎಂದು ನಾಮಕರಣ ಮಾಡಲಾಯಿತು.

ಮಹಾನಗರ ಪಾಲಿಕೆಯ 31 ಎಕರೆ ಪ್ರದೇಶದಲ್ಲಿ 3750 ಆಶ್ರಯ ಮನೆ ನಿರ್ಮಾಣದ ಯೋಜನೆಯಲ್ಲಿ ಮೊದಲ ಹಂತವಾಗಿ 1493 ಮನೆಗಳ ನಿರ್ಮಾಣ ಕಾರ್ಯ ಹಮ್ಮಿಕೊಳ್ಳಲಾಗಿದೆ.

ಇದೇ ಸಂದರ್ಭ ಸಚಿವ ವಿ.ಸೋಮಣ್ಣರಿಗೆ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮೈಸೂರು ಪೇಠಾ ತೊಡಿಸಿ ಸನ್ಮಾನಿಸಿದರು.
ನಾಗಠಾಣ ಶಾಸಕ ದೇವಾನಂದ ಚವ್ಹಾಣ, ವಿಡಿಎ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಜಿಲ್ಲಾಧಿಕಾರಿ ಪಿ.ಸುನೀಲಕುಮಾರ, ಜಿಪಂ ಸಿಇಒ ಗೋವಿಂದ ರೆಡ್ಡಿ, ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ್, ವಿಡಿಎ ಸದಸ್ಯರು ಸೇರಿದಂತೆ ಸಾರ್ವಜನಿಕರು ಪಾಲ್ಗೊಂಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss