Thursday, August 11, 2022

Latest Posts

ವಿಜಯಪುರ| ಎಂಎಲ್ ಸಿ ಸಿ.ಪಿ. ಯೋಗೇಶ್ವರ ಹೇಳಿಕೆ ಸತ್ಯಕ್ಕೆ ದೂರ: ಸಚಿವ ಶಿವರಾಂ ಹೆಬ್ಬಾರ

ವಿಜಯಪುರ: ಮಾಜಿ ಸಿಎಂ ಹೆಚ್ಡಿಕೆ ಬಿಜೆಪಿಯೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಸಿ‌.ಪಿ. ಯೋಗೇಶ್ವರ ಹೇಳಿಕೆ ಸತ್ಯಕ್ಕೆ ದೂರವಾದ ಮಾತು ಎಂದು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ನೂತನ ಎಂಎಲ್ ಸಿ ಸಿ.ಪಿ. ಯೋಗೇಶ್ವರ ಯಾವ ಅರ್ಥದಲ್ಲಿ ಹೇಳಿದ್ದಾರೆ ಗೊತ್ತಿಲ್ಲ. ಆದರೆ, ಸಿಎಂ ಯಡಿಯೂರಪ್ಪನವರು ಸರ್ಕಾರ ನಡೆಸಲು ಯಾರಿಂದಲೂ ಕಲಿತುಕೊಳ್ಳುವ ಅವಶ್ಯಕತೆ ಇಲ್ಲ‌. ಯಡಿಯೂರಪ್ಪನವರಿಗೆ ನಾಲ್ಕು ದಶಕದ ಅನುಭವ ಇದೆ. ಅಲ್ಲದೇ, ಸಿಎಂ ಅವರನ್ನು ಎಲ್ಲ ಪಕ್ಷದ ಶಾಸಕರು ಭೇಟಿ ಆಗುತ್ತಾರೆ. ಹಾಗಂತ ರಾಜಕೀಯ ಕಣ್ಣಿಂದ ನೋಡಬಾರದು‌ ಎಂದರು.
ಮೂರು ವರ್ಷಗಳ ಕಾಲ ಯಡಿಯೂರಪ್ಪನವರೇ ಸಿಎಂ ಆಗಿ ಮುಂದುವರೆಯುತ್ತಾರೆ. ಸಿಎಂ ಬದಲಾವಣೆ ಪ್ರಶ್ನೆನೆ ಇಲ್ಲ. ಸರ್ಕಾರದ ಆಡಳಿತ ಮುಗಿಯೂವ ವರೆಗೂ ಸಿಎಂಯಾಗಿ ಯಡಿಯೂರಪ್ಪನವರು ಇರುತ್ತಾರೆ ಎಂದರು.
ಇನ್ನು ಕೋವಿಡ್ ವಿಚಾರದಲ್ಲಿ ಸಿದ್ದರಾಮಯ್ಯನವರು ಕಾಂಗ್ರೆಸ್ ಕಣ್ಣಿನಿಂದ ನೋಡಬಾರದು ಎಂದು ಟೀಕಿಸಿದರು.
ಕೋವಿಡ್ ಗೆ ಜೆಡಿಎಸ್, ಕಾಂಗ್ರೆಸ್, ಬಿಜೆಪಿಯವರು ಒಳಗಾಗಿದ್ದಾರೆ. ಕೋವಿಡ್ ಯಾವ ಪಕ್ಷವನ್ನು ಬಿಟ್ಟಿಲ್ಲ. ಪಕ್ಷದ ಬಣ್ಣದಿಂದ ಕೋವಿಡ್ ರೋಗವನ್ನು ಅಳೆಯುವುದಕ್ಕೆ ಆಗಲ್ಲ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss