Sunday, August 14, 2022

Latest Posts

ವಿಜಯಪುರ| ಐದು ಜನರಲ್ಲಿ ಸೋಂಕು ಪತ್ತೆ: ಸೋಂಕಿತರು 75ಕ್ಕೆ ಏರಿಕೆ

ವಿಜಯಪುರ: ಜಿಲ್ಲೆಯಲ್ಲಿ ಮಂಗಳವಾರ ಐದು ಜನರಲ್ಲಿ ಸೋಂಕು ಪತ್ತೆಯಾಗಿದ್ದು, ನಾಲ್ವರು ಮೃತಪಟ್ಟಿರುವುದು ಸೇರಿದಂತೆ ಸೋಂಕಿತರ ಸಂಖ್ಯೆ 75ಕ್ಕೆ ಏರಿಕೆಯಾಗಿದೆ.

ಮಹಾರಾಷ್ಟ್ರದಿಂದ ವಾಪಸ್ ಆಗಮಿಸಿದ್ದ ಕಾರ್ಮಿಕರಾದ ಪಿ.2203ರ 18 ವರ್ಷದ ಯುವಕ, ಪಿ.2204ರ 34 ವರ್ಷದ ಪುರುಷ, ಪಿ.2205ರ 30 ವರ್ಷದ ಪುರುಷ, ಪಿ.2206ರ 60 ವರ್ಷದ ವೃದ್ದ, ಪಿ.2207ರ 17 ವರ್ಷದ ಯುವಕ ಸೇರಿದಂತೆ ಐದು ಜನರಿಗೆ ಸೋಂಕು ದೃಢಪಟ್ಟಿದೆ.

ಈ ಕಾರ್ಮಿಕರು ಕಳೆದ ಮೇ 15 ರ ಬಳಿಕ ಮಹಾರಾಷ್ಟ್ರದಿಂದ ವಿಜಯಪುರಕ್ಕೆ ಆಗಮಿಸಿದ್ದರು. ಸೇವಾ ಸಿಂಧು ಪಾಸ್ ಮೂಲಕ ಮಹಾರಾಷ್ಟ್ರದಿಂದ ತವರು ಜಿಲ್ಲೆಗೆ ಆಗಮಿಸಿದ್ದ ಇವರನ್ನು, ಜಿಲ್ಲಾಡಳಿತ ಕ್ವಾರಂಟೈನ್ ಮಾಡಿತ್ತು. ಮೊರಾರ್ಜಿ ವಸತಿ ಶಾಲೆ ಹಾಗೂ ವಿವಿಧ ಶಾಲೆಗಳಲ್ಲಿ ಈ ಕಾರ್ಮಿಕರನ್ನು ಕ್ವಾರಂಟೈನ್ ಮಾಡಲಾಗಿತ್ತು.

ಸೋಂಕಿನಿಂದ ಬಳಲುತ್ತಿದ್ದವರಲ್ಲಿ 44 ಜನರು ಈಗಾಗಲೇ ಗುಣಮುಖಗೊಂಡು, ಜಿಲ್ಲಾಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ, ಇನ್ನುಳಿದ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss