ಪರಶುರಾಮ ಶಿವಶರಣ
ವಿಜಯಪುರ: ಜಿಲ್ಲೆಯಲ್ಲಿ ಮಹಾಮಾರಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಳಗೊಳ್ಳುತ್ತ ಭೀತಿ ಹುಟ್ಟಿಸುತ್ತಿದ್ದರೆ, ಇದಕ್ಕೆ ಪೈಪೋಟಿಯಾಗಿ ತಾನೇನೂ ಕಡಿಮೆಯಿಲ್ಲ ಎನ್ನುವಂತೆ ನಾಲ್ಕೆöÊದು ದಿನದಿಂದ ಬಿಸಲಿನ ಪ್ರಖರತೆ ಹೆಚ್ಚಳಗೊಂಡಿದಕ್ಕೆ, ಜಿಲ್ಲೆಯ ಜನರು ಕಾದ ಕುಲುಮೆಗೆ ಸಿಲುಕುವಂತಾಗಿದೆ.
ಪ್ರಸಕ್ತ ಬೇಸಿಗೆಯ ಬಿಸಿಲು 40 ರ ಗಡಿ ದಾಟಿದ್ದು, ಕಳೆದ ಮೇ 6 ರಂದು 42.1 ಡಿಗ್ರಿ ಸೆಲ್ಸಿಯಸ್ ಹಾಗೂ ಮೇ 7 ರಂದು 42.0 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾದರೆ, ಶುಕ್ರವಾರ 40. 0 ಡಿಗ್ರಿ ಹಾಗೂ ಶನಿವಾರ 40.0 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು, ಕೊರೋನಾ ಸೋಂಕಿನ ತಲ್ಲಣದ ಜೊತೆಗೆ ಕೆಂಡ ಕಾರುವ ಬಿಸಿಲಿಗೂ ನಲಗುವಂತಾಗಿದೆ.
ಈ ಹಿಂದಿನ ಮೇ 1, 2018ರ ರಂದು 42.0 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾದರೆ, ಮೇ 30, 2019 ರಂದು 43.0 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು. ಈ ವರ್ಷಗಳಲ್ಲೇ ಇದೇ ಹೆಚ್ಚಿನ ಉಷ್ಣಾಂಶ ದಾಖಲಾಗಿತ್ತು. ಆದರೆ ಕಳೆದೆರಡು ವರ್ಷಗಳಿಗೆ ಹೋಲಿಸಿದರೆ, ಸದ್ಯ ಮೇ 6 ರಂದು 42.1 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಮೇ ತಿಂಗಳ ಆರಂಭದಲ್ಲಿಯೇ ದಾಖಲಾಗಿದ್ದು, ಈ ತಿಂಗಳ ಅಂತ್ಯಕ್ಕೆ ಇನ್ನೆಷ್ಟು ಬಿಸಿಲು ಹೆಚ್ಚಳಗೊಳ್ಳುತ್ತದೆ ಎನ್ನುವ ಆತಂಕ ಸಾರ್ವಜನಿಕರಲ್ಲಿ ಮೂಡುವಂತಾಗಿದೆ.
ಲಾಕ್ಡೌನ್ ಸಡಿಲಿಕೆ, ಹೆಚ್ಚಿದ ಬಿಸಿಲು ಸೆಖೆ
ಕೊರೋನಾ ಸೋಂಕು ನಿಯಂತ್ರಣಕ್ಕಾಗಿ ಕಟ್ಟುನಿಟ್ಟಿನ ಲಾಕ್ಡೌನ್ ಮಾಡಿದ್ದರಿಂದ ಬರೊಬ್ಬರಿ ಒಂದೂವರೆ ತಿಂಗಳ ಕಾಲ ಮನೆಯಲ್ಲಿ ಕುಳಿತಿದ್ದ ಜನರು, ಯಾವಾಗ ಮನೆ ಹೊರಗೆ ಹೋಗಲಿ ಎಂದು ಚಡಪಡಿಸುವಂತಾಗಿತ್ತು. ಸದ್ಯ ಲಾಕ್ಡೌನ್ ಕೊಂಚ ಸಡಿಲಿಕೆ ಮಾಡಲಾಗಿದ್ದು, ಬೆಳಗ್ಗೆ ಹಾಗೂ ಸಂಜೆ ಮನೆಯಿಂದ ಹೊರ ಬಂದು, ತಮ್ಮ ಕೆಲಸ, ಕಾರ್ಯಗಳನ್ನು ಮುಗಿಸಿ, ಬಿಸಿಲು ಬಲಿತುಕೊಳ್ಳುವ ಮುನ್ನ ಮತ್ತೆ ಮನೆ ಸೇರುತ್ತಿದ್ದಾರೆ.
ಉದ್ಯಾನ ಭಣ ಭಣ, ನೆರಳು ಅರಿಸುವ ಮನ
ಬೇಸಿಗೆ ಬಿಸಲಿನ ಹೊಡೆತಕ್ಕೆ ಉದ್ಯಾನ, ಗಿಡ, ಮರಗಳ ನೆರಳಿನಡೆ ಜನರು ಆಸರೆ ಪಡೆಯುತ್ತಿದ್ದರು. ಆದರೆ ಕೊರೋನಾ ಕಂಟಕದಿAದ ಉದ್ಯಾನ, ಮೈದಾನದ ಗಿಡ, ಮರಗಳ ಅಡಿಯಲ್ಲಿ ಗುಂಪು ಗುಂಪುಗಾಗಿ ಕೂಡುವುದನ್ನು ನಿರ್ಬಂಧಿಸಲಾಗಿದ್ದು, ಎಲ್ಲ ಉದ್ಯಾನಗಳು ಭಣಗುಡುತ್ತಿದ್ದು, ಗಿಡ, ಮರಗಳ ನೆರಳಿದ್ದರೂ ಕೂಡುವ ಹಾಗಿಲ್ಲದಕ್ಕೆ ಜನರು ಮರಗುವಂತಾಗಿದೆ. ಬಿಸಿಲಿನ ಧಗೆ ತಣಿಸಲು ಮನೆಯ ಅಕ್ಕ ಪಕ್ಕದಲ್ಲಿ ನೆರಳು ಹುಡುಕುವ ಪರಿಸ್ಥತಿ ನಿರ್ಮಾಣವಾಗಿದೆ.