Thursday, August 18, 2022

Latest Posts

ವಿಜಯಪುರ| ಕೊರೋನಾ ಖರ್ಚು, ವೆಚ್ಚದ ಕುರಿತು ಸರ್ಕಾರ ಶ್ವೇತಪತ್ರ ಹೊರಡಿಸಲಿ: ಪಾಟೀಲ

ವಿಜಯಪುರ: ಕೊರೋನಾ ಖರ್ಚು-ವೆಚ್ಚದ ಬಗ್ಗೆ ಸರ್ಕಾರ ಶ್ವೇತಪತ್ರ ಹೊರಡಿಸಬೇಕು. ಈ ಕುರಿತು ತನಿಖೆ ನಡೆಸಲು ಉಚ್ಛ ನ್ಯಾಯಾಲಯದ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖಾ ಆಯೋಗ ರಚನೆಯಾಗಬೇಕು ಎಂದು ಕಾಂಗ್ರೆಸ್ ಹಿರಿಯ ನಾಯಕ ಎಚ್.ಕೆ. ಪಾಟೀಲ ಒತ್ತಾಯಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೊರೋನಾ ಸಂದರ್ಭದ ಸಲಕರಣೆ ಖರೀದಿಯಲ್ಲಿ 4167 ಕೋಟಿ ರೂ.ಗಳ ಭ್ರಷ್ಟಾಚಾರ ನಡೆದಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಸ್ತಾಪಿಸಿದ್ದರೂ ರಾಜ್ಯ ಸರ್ಕಾರ ಲೆಕ್ಕ ಕೊಡುತ್ತಿಲ್ಲ. ಇದು ಕೊರೋನಾ ಸಂದರ್ಭದ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಸಂಸ್ಕಾರವಾಗಿದೆ. ಈ ಹಗರಣದ ಕುರಿತು ದಾಖಲೆಗಳ ಪುಸ್ತಕ ಬಿಡುಗಡೆ ಮಾಡಿದ್ದೇವೆ, ಈಗಲಾದರೂ ಈ ದಾಖಲೆಗಳ ಕುರಿತು ಲೆಕ್ಕ ಕೊಡಬೇಕು ಎಂದು ಆಗ್ರಹಿಸಿದರು.
ವೆಂಟಿಲೇಟರ್ ಖರೀದಿಯಲ್ಲಿಯೂ ಭ್ರಷ್ಟಾಚಾರ, ಅವ್ಯವಹಾರ ಮಾಡಿರುವ ಸರ್ಕಾರದಿಂದ ಏನೂ ಅಪೇಕ್ಷೆ ಮಾಡಲು ಸಾಧ್ಯವಿಲ್ಲ. ಅನೇಕ ಸಂಘ-ಸಂಸ್ಥೆಗಳು ಉಚಿತವಾಗಿ ಮಾಸ್ಕ್, ಪಿಪಿಇ ಕಿಟ್ ವಿತರಿಸುತ್ತಿದ್ದಾರೆ. ಆದರೆ ಸರ್ಕಾರ ಮಾಸ್ಕ್ ಬೆಲೆಯ ದುಪ್ಪಟ್ಟು ಬೆಲೆ ವಿಧಿಸಿ ನೀಚ ಮಟ್ಟಕ್ಕೆ ಇಳಿದಿರುವುದು ಖೇದಕರ.
ಕಡಿಮೆ ಗುಣಮಟ್ಟದ ಪಿಪಿಇ ಕಿಟ್ ಖರೀದಿಸುವ ಮೂಲಕ ಸರ್ಕಾರ ಕೊರೊನಾ ವಾರಿಯರ್ಸ್ಗಳಿಗೆ ಮೋಸ ಮಾಡಿರುವುದು ಅಕ್ಷಮ್ಯ ಅಪರಾಧ. ಕಡಿಮೆ ಗುಣಮಟ್ಟದ ಪಿಪಿಇ ಕಿಟ್ ಖರೀದಿಸಿದ ಮಂತ್ರಿ, ಅಧಿಕಾರಿಯನ್ನು ಜೈಲಿಗೆ ಹಾಕುವ ಕೆಲಸವೇಕೆ ಮಾಡಲಿಲ್ಲ ಎಂದು ಪ್ರಶ್ನಿಸಿದರು.
ಬೆಂಗಳೂರಿನಲ್ಲಿ 10 ಸಾವಿರ ಕೊರೋನಾ ಸೋಂಕಿತರು ನಾಪತ್ತೆಯಾಗಿದ್ದು, ಈ ಕುರಿತು ಸರ್ಕಾರ 24 ಗಂಟೆಗಳಲ್ಲಿ ಉತ್ತರ ನೀಡಬೇಕು. ಕೂಡಲೇ ಸಿಎಂ ಯಡಿಯೂರಪ್ಪ ರಾಜೀನಾಮೆ ನೀಡಬೇಕು ಎಂದರು.
ಶಾಸಕರಾದ ಎಂ.ಬಿ. ಪಾಟೀಲ, ಶಿವಾನಂದ ಪಾಟೀಲ, ವಿಧಾನ ಪರಿಷತ್ ಸದಸ್ಯ ಭೋಸ್‌ರಾಜ್, ಶಾಸಕ ಯಶವಂತರಾಯಗೌಡ ಪಾಟೀಲ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪ್ರೊ.ರಾಜು ಆಲಗೂರ, ಅಬ್ದುಲ್‌ಹಮೀದ್ ಮುಶ್ರೀಫ್, ಹಾಸಿಂಪೀರ ವಾಲೀಕಾರ, ಮೊಹ್ಮದ್‌ರಫೀಕ್ ಟಪಾಲ್ ಸುದ್ದಿಗೋಷ್ಠಿಯಲ್ಲಿ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!