Thursday, July 7, 2022

Latest Posts

ವಿಜಯಪುರ| ಕೊರೋನಾ ಭೀತಿಯಿಂದ ಓರ್ವ ಆತ್ಮಹತ್ಯೆ

ವಿಜಯಪುರ: ಕೊರೋನಾ ಲಕ್ಷಣ ಕಂಡು ಬಂದಿರುವುದನ್ನೇ ಮಾನಸಿಕ ಮಾಡಿಕೊಂಡು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದಲ್ಲಿ ಗುರುವಾರ ನಡೆದಿದೆ.
ಇಲ್ಲಿನ ಜೋರಾಪುರ ಪೇಟೆ ಬಡಾವಣೆಯ 57 ವರ್ಷದ ವ್ಯಕ್ತಿ, ಅನಾರೋಗ್ಯ ಕಾರಣದಿಂದ ಕಳೆದ ಮೂರು ದಿನಗಳ ಹಿಂದೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಆಗ ಈತನಿಗೆ ಕೊರೋನಾ ಲಕ್ಷಣಗಳು ಕಂಡು ಬಂದ ಹಿನ್ನೆಲೆ ಖಾಸಗಿ ವೈದ್ಯರು ಕೋವಿಡ್ ಆಸ್ಪತ್ರೆಗೆ ತೆರಳುವಂತೆ ಸೂಚಿಸಿದ್ದಾರೆ. ಆದರೆ ಈತ ಕೋವಿಡ್ ಆಸ್ಪತ್ರೆಗೆ ತೆರಳುವ ಮುಂಚೆಯೇ, ತನಗೆ ಕೊರೋನಾ ಬಂದಿದೆ ಎನ್ನುವ ಭಯದಿಂದ ತಮ್ಮ ಮನೆಯಲ್ಲಿ ಬೆಳಗ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ನಗರದ ಗಾಂಧಿಚೌಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss