ವಿಜಯಪುರ: ಕೊರೋನಾ ಸೋಂಕಿನಿಂದ ಬಳಲುತ್ತಿದ್ದ 6 ತಿಂಗಳ ಮಗು ಸೇರಿದಂತೆ ಮೂವರು ಮಂಗಳವಾರ ಗುಣಮುಖರಾಗಿ ಜಿಲ್ಲಾಸ್ಪತ್ರೆಯಿಂದ ಬಿಡುಗಡೆಗೊಂಡರು.
ರೋಗಿ ಸಂಖ್ಯೆ 309ರ 70 ವರ್ಷ ವೃದ್ಧೆ, ರೋಗಿ ಸಂಖ್ಯೆ 329ರ 6 ತಿಂಗಳ ಮಗು, ರೋಗಿ ಸಂಖ್ಯೆ 330ರ 28 ವರ್ಷದ ಮಹಿಳೆ ಸೋಂಕಿನಿAದ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಯಿತು.
ಜಿಲ್ಲೆಯಲ್ಲಿ ಈವರೆಗೆ 47 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಇವರಲ್ಲಿ ಮೂವರು ಕೊರೋನಾ ಸೋಂಕಿತ ರೋಗಿಗಳು ಮೃತಪಟ್ಟಿದ್ದು, 22 ಕೊರೋನಾ ಸೋಂಕಿತ ರೋಗಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇನ್ನುಳಿದ 22 ಸೋಂಕಿತರ ಆರೋಗ್ಯ ಸ್ಥಿರವಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.