Thursday, June 30, 2022

Latest Posts

ವಿಜಯಪುರ| ಕ್ವಾರಂಟೈನ್ ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು: ಡಿಸಿ ಪಾಟೀಲ ಎಚ್ಚರಿಕೆ

ವಿಜಯಪುರ: ಮಹಾರಾಷ್ಟ್ರ ರಾಜ್ಯದಿಂದ ಆಗಮಿಸಿದವರನ್ನು ಸಾಂಸ್ಥಿಕ ಕ್ವಾರಂಟೈನ್ ನಂತರ ಹೋಮ್ ಕ್ವಾರಂಟೈನ್ ಮಾಡಲಾಗುತ್ತಿದ್ದು, ನಿಯಮ ಉಲ್ಲಂಘಿಸಿದವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿದ ಅವರು, ಹೋಮ್ ಕ್ವಾರಂಟೈನ್ ಅವಧಿ ಮತ್ತು ನಿಯಮ ಉಲ್ಲಂಘನೆ ಮಾಡಿದಲ್ಲಿ ಅಂತಹವರನ್ನು ಪುನಃ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಲಾಗುವುದು. ಜಿಲ್ಲೆಯ ವಿವಿಧ ಕಡೆಗಳಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ), ಗ್ರಾಮ ಲೆಕ್ಕಾಧಿಕಾರಿಗಳು, ಬೀಟ್ ಪೊಲೀಸ್‌ರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಒಳಗೊಂಡ ರಚಿಸಲಾಗಿರುವ ಗ್ರಾಮ ಕಾರ್ಯಪಡೆ ಸಮಿತಿಗಳು ಕೂಡಾ ಬೇರೆ-ಬೇರೆ ರಾಜ್ಯಗಳಿಂದ ಅಧಿಕೃತವಾಗಿ ಮತ್ತು ಮಾಹಿತಿಯಿಲ್ಲದೆ ಬಂದವರ ಬಗ್ಗೆ ನಿಗದಿತ ಮಾಹಿತಿ ನೀಡುವ ಜೊತೆಗೆ ಸಂಬಂಧಪಟ್ಟವರನ್ನು ಸಾಂಸ್ಥಿಕ ಮತ್ತು ಹೋಮ್ ಕ್ವಾರಂಟೈನ್ ಮಾಡಲು ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಈಗಾಗಲೆ 135 ಕ್ವಾರಂಟೈನ್ ಕೇಂದ್ರಗಳಲ್ಲಿ 3500 ಜನರು ಸಾಂಸ್ಥಿಕ ಕ್ವಾರಂಟೈನ್‌ದಲ್ಲಿದ್ದಾರೆ. ಎಲ್ಲ ತಾಲೂಕುಗಳಲ್ಲಿ ಹೋಮ್ ಕ್ವಾರಂಟೈನ್ ನೋಡಲ್ ಅಧಿಕಾರಿಯಾಗಿ ಪ್ರತಿ ತಾಲೂಕಿಗೆ ಒಬ್ಬರಂತೆ 12 ಜನ ಹಿರಿಯ ಅಧಿಕಾರಿಗಳನ್ನು ಸಹ ನೇಮಿಸಲಾಗಿದೆ. ಮಹಾರಾಷ್ಟç ರಾಜ್ಯದಿಂದ ಬಂದವರಲ್ಲಿ ಒಟ್ಟು 67 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, 6 ರೋಗಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಇವರಿಗ್ಕೆ ಸಂಬಂಧಪಟ್ಟಂತೆ ಸರ್ಕಾರದ ಹೊಸ ನಿರ್ದೇಶನದಂತೆ ಪಾಸಿಟಿವ್ ಪ್ರಕರಣ ದೃಢಪಟ್ಟ ಜಿಲ್ಲೆಯ 15 ಗ್ರಾಮಗಳನ್ನು 15 ಕಂಟೇನ್ಮೆಂಟ್ ವಲಯಗಳನ್ನಾಗಿ ಘೋಷಿಸಲಾಗಿದೆ. ಮಹಾರಾಷ್ಟ್ರ ರಾಜ್ಯದಿಂದ ಮರಳಿದ ಜನರಿಗೆ ಸೀಮಿತವಾಗಿ ಸ್ಥಾಪಿಸಲಾದ ಈ 15 ಕಂಟೇನ್ಮೆಂಟ್ ವಲಯಗಳು ಈ ಕೆಳಗಿನಂತಿವೆ. ಬರಡೋಲ್ (ಚಡಚಣ), ಮುಳಸಾವಳಗಿ (ದೇವರಹಿಪ್ಪರಗಿ), ಇಂಗಳಗಿ (ದೇವರಹಿಪ್ಪರಗಿ), ಕುಂಟೋಜಿ (ಮುದ್ದೇಬಿಹಾಳ), ಮಾರಡಗಿ ಎಲ್.ಟಿ. (ನಿಡಗುಂದಿ), ಆಲಮೇಲ (ಸಿಂದಗಿ), ಗಣಿಹಾರ (ಸಿಂದಗಿ), ಗುತ್ತರಗಿ (ಸಿಂದಗಿ), ಕೋರಳ್ಳಿ (ಸಿಂದಗಿ) ಮಾದನಳ್ಳಿ(ಸಿಂದಗಿ), ನೀರಲಗಿ(ತಾಳಿಕೋಟಿ), ಲಿಂಗದಳ್ಳಿ(ತಾಳಿಕೋಟಿ), ತಮದಡ್ಡಿ(ತಾಳಿಕೋಟಿ), ಬರಟಗಿ(ತಿಕೋಟಾ), ಕಪ್‌ನಿಂಬರಗಿ(ಇಂಡಿ) ಗ್ರಾಮಗಳನ್ನು ಕಂಟೇನ್ಮೆಂಟ್ ಗ್ರಾಮಗಳನ್ನಾಗಿ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss