ವಿಜಯಪುರ: ಕೊರೋನಾ ಲಾಕ್ಡೌನ್ನಲ್ಲಿ ಬಹುತೇಕ ಜನರು ಮನೆಯಲ್ಲಿ ಕುಳಿತು ಸಮಯ ಕಳೆದರೆ, ಈ ಸಮಯವನ್ನೇ ಸದುಪಯೋಗ ಪಡೆಸಿಕೊಂಡ ಬಿಇ ವಿದ್ಯಾರ್ಥಿಯೊಬ್ಬ ಐಆರ್ ಕಾನ್ಸೆಪ್ಟ್ ಸೆನ್ಸಾರ್ ಮಾದರಿಯಲ್ಲಿ ಆಟೋಮ್ಯಾಟಿಕ್ ಸ್ಯಾನಿಟೈಜರ್ ಯೂನಿಟ್ನ್ನು ತಯಾರಿಸುವ ಮೂಲಕ ಗಮನ ಸೆಳೆದಿದ್ದಾನೆ.
ನಗರದ ಜೈಲ ದರ್ಗಾ ರಸ್ತೆ ಬಳಿಯ ಗಂಗಾಪುರದ ನಿವಾಸಿ ಅಭಿಷೇಕ ಹಿಪ್ಪರಗಿ, ಬಾಗಲಕೋಟೆ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜ್ನಲ್ಲಿ ಮೊದಲ ವರ್ಷದ ಬಿಇ ವ್ಯಾಸಂಗ ಮಾಡುತ್ತಿರುವ ಈತ, ಆಟೋಮ್ಯಾಟಿಕ್ ಸ್ಯಾನಿಟೈಜರ್ ಯೂನಿಟ್ ತಯಾರಿಸಿ, ಪ್ರಾಧ್ಯಾಪಕರ ಮೆಚ್ಚುಗೆ ಪಡಿದಿದ್ದಾನೆ.
ಆಟೋಮ್ಯಾಟಿಕ್ ಸ್ಯಾನಿಟೈಜರ್: ಈ ಆಟೋಮ್ಯಾಟಿಕ್ ಸ್ಯಾನಿಟೈಜರ್ಗೆ ಅಳವಡಿಸಿರುವ ಐಆರ್ ಸೆನ್ಸಾರ್ ಮಾದರಿಯ ಇನ್ಫಾರೆಡ್ ರೆಡಿಯೆಶನ್ ಅಂಗೈ ಸ್ಪರ್ಶ ಆಗುವುದರಿಂದ ಯೂನಿಟ್ ಒಳಗಿನ ಸ್ಯಾನಿಟೈಜರ್ ತಾನಾಗಿಯೇ ಬೀಳುತ್ತದೆ.
ಇಂದಿನ ಕೊರೋನಾ ಸೋಂಕು ಮುನ್ನೆಚ್ಚೆರಿಕೆಯಾಗಿ ಎರಡು ಗಂಟೆಗಳಿಗೊಮ್ಮೆ ಕೈಯನ್ನು ತೊಳೆದುಕೊಳ್ಳಲಾಗುತ್ತಿದೆ. ಈ ಸಂದರ್ಭ ಸ್ಯಾನಿಟೈಜರ್ ಬಾಟಲಿಯನ್ನು ಕೈಯಿಂದ ಹಿಡಿದು, ಕ್ಯಾಪ್ ಬಿಚ್ಚಿ ಅಂಗೈಯಲ್ಲಿ ಸ್ಯಾನಿಟೈಜರ್ ಹಾಕಿಕೊಳ್ಳಬೇಕು. ಹೀಗಾಗಿ ಈ ತೊಂದರೆ ಆಟೋಮ್ಯಾಟಿಕ್ ಸ್ಯಾನಿಟೈಜರ್ ಯೂನಿಟ್ನಿಂದ ತಪ್ಪುವುದು ವಿಶೇಷ.
1200 ರೂ.ಗಳ ಖರ್ಚಲ್ಲಿ ಯೂನಿಟ್ ತಯಾರಿಕೆ: ಆಟೋಮ್ಯಾಟಿಕ್ ಸ್ಯಾನಿಟೈಜರ್ನ 5 ಲೀಟರ್ ಕ್ಯಾನಿನ ಯೂನಿಟ್ ತಯಾರಿಕೆಗೆ ಕೇವಲ 1200 ರೂ.ಗಳನ್ನು ಖರ್ಚು ಮಾಡಲಾಗಿದೆ. ಐಆರ್ ಎಲ್ಇಡಿ, ಫೋಟೋಡೆಯಾಡ್, ಟ್ರಾಂಜಿಸ್ಟರ್, ಐಸಿ, ಫವರ್ ಮೂಡಿವಿಲ್, ಡಿಸಿ ಪಂಪ್, ಎಗ್ರೋ ನಾಜೋಲ್ ಹಾಗೂ 5 ಲೀಟರ್ ಕ್ಯಾನ್ ಸೇರಿದಂತೆ ಇತರೆ ವಸ್ತುಗಳನ್ನು ಬಳಸಿಕೊಂಡು ಆಟೋಮ್ಯಾಟಿಕ್ ಸ್ಯಾನಿಟೈಜರ್ ಯೂನಿಟ್ ತಯಾರಿಸಿದ್ದಾನೆ.
ಹೆಚ್ಚಿನ ಸದಸ್ಯರಿದಲ್ಲಿ ಅನುಕೂಲ: ಒಂದು ಸ್ಯಾನಿಟೈಜರ್ ಬಾಟಲಿಯಿಂದ ಒಬ್ಬರು ಪದೇ ಪದೆ ಕೈ ತೊಳೆಯುವುದು ಒಳ್ಳೆಯದು. ಆದರೆ ಕುಟುಂಬದ ಇತರೆ ಸದಸ್ಯರು ಒಂದೇ ಸ್ಯಾನಿಟೈಜರ್ ಬಾಟಲಿಯನ್ನು ಪದೇ ಪದೆ ಮುಟ್ಟಿ ಉಪಯೋಗಿಸುವುದು ಕಷ್ಟ. ಅಲ್ಲದೆ ಅಂಗಡಿ ಹಾಗೂ ಕಚೇರಿಗಳಂತಹ ಹೆಚ್ಚಿನ ಸಿಬ್ಬಂದಿಗಳು ಇರುವ ಸ್ಥಳದಲ್ಲಿ ಈ ಆಟೋಮ್ಯಾಟಿಕ್ ಸ್ಯಾನಿಟೈಜರ್ ಯೂನಿಟ್ ಬಳಕೆ ಮಾಡುವುದರಿಂದ, ಕೈ ತೊಳೆಯಲು ಅತಿ ಅನುಕೂಲವಾಗುತ್ತದೆ. ಅಲ್ಲದೆ ಸೋಂಕು ಹರಡುವಿಕೆ ನಿಯಂತ್ರಿಸಲೂ ಸಾಧ್ಯವಾಗುತ್ತೆ. ಲಾಕ್ ಡೌನ್ ವೇಳೆ ಖಾಲಿ ಕುಂತಾಗ, ಈ ಯೂನಿಟನ ಕಲ್ಪನೆ ಬಂದಿದ್ದು, ಅದಕ್ಕೆ ಮೂರ್ತ ರೂಪ ನೀಡಿ ಈ ಮಾದರಿ ಸಿದ್ದಪಡಿಸಿರುವೆ ಎಂದು ವಿದ್ಯಾರ್ಥಿ ಹೇಳುತ್ತಾನೆ.
ಸ್ಥಳೀಯ ಪರಿಕರಗಳನ್ನು ಬಳಸಿಕೊಂಡು ಸದ್ಯ 5 ಲೀಟರ್ ಸ್ಯಾನಿಟೈಜರ್ ಯೂನಿಟ್ ತಯಾರಿಸಿದ ವಿದ್ಯಾರ್ಥಿ ಅಭಿಷೇಕ ಹಿಪ್ಪರಗಿ ಇನ್ನೂ 10 ಲೀಟರ್ ಹಾಗೂ 25 ಲೀಟರ್ನ ಸ್ಯಾನಿಟೈಜರ್ ಯೂನಿಟ್ನ್ನು ತಯಾರಿಸುವ ನಿಟ್ಟಿನಲ್ಲಿ ಮುಂದಾಗುತ್ತಿದ್ದಾನೆ.
ಸ್ಯಾನಿಟೈಜರ್ ಬಾಟಲಿಯನ್ನು ಹಲವು ಜನರು ಮುಟ್ಟಿ ಸ್ಯಾನಿಟೈಜರ್ನ್ನು ಉಪಯೋಗಿಸುವುದರಿಂದ ಅನಾನುಕೂಲವಾಗುತ್ತದೆ. ಅಲ್ಲದೆ ಸೋಂಕಿತ ವ್ಯಕ್ತಿ ಬಳಸಿದ್ದಲ್ಲಿ, ಇತರರಿಗೂ ಸೋಂಕು ಹರಡುವ ಸಾಧ್ಯತೆಯೂ ಉಂಟು. ಹೀಗಾಗಿ ಸ್ಯಾನಿಟೈಜರ್ ಯೂನಿಟ್ ಎದುರು ಅಂಗೈ ಹಿಡಿದರೆ ತಾನಾಗಿಯೇ ಸ್ಯಾನಿಟೈಜರ್ ಬೀಳುವುದರಿಂದ ಕೊರೋನಾ ಸೋಂಕು ಹರಡುವಿಕೆ ತಡೆಯಲು ಈ ಯೂನಿಟ್ ಸಹಕಾರಿಯಾಗಿದೆ.
– ಅಭಿಷೇಕ ಹಿಪ್ಪರಗಿ ಬಿಇ ವಿದ್ಯಾರ್ಥಿ, ವಿಜಯಪುರ