ವಿಜಯಪುರ: ತಾಲೂಕಿನ ಅರಕೇರಿ ತಾಂಡಾ ಬಳಿ ಭೀಮಾತೀರದ ಹಂತಕ ಮಹಾದೇವ ಸಾಹುಕಾರ ಭೈರಗೊಂಡನ ಮೇಲೆ ಅಪರಿಚಿತರಿಂದ ಸೋಮವಾರ ಮಧ್ಯಾಹ್ನ ಏಕಾಏಕಿ ನಡೆದ ಗುಂಡಿನ ದಾಳಿಯಲ್ಲಿ ಭೈರಗೊಂಡನ ಸಹಚರನೊಬ್ಬ ಸಾವಿಗೀಡಾಗಿದ್ದಾನೆ.
ಮೃತಪಟ್ಟವನನ್ನು ಬಾಬುರಾಯ ಎಂದು ಹೇಳಲಾಗುತ್ತಿದೆ.
ಮಹಾದೇವ ಸಾಹುಕಾರ ಈತನು ತನ್ನ ಸಹಚರರೊಂದಿಗೆ ಕಾರ್ನಲ್ಲಿ ಅರಕೇರಿ ಅಮೋಘಸಿದ್ಧ ದೇವಸ್ಥಾನಕ್ಕೆ ಹೋಗಿ ಬರುತ್ತಿದ್ದ ವೇಳೆ, ನಾಲ್ಕು ಕಾರ್ಗಳ ಮಧ್ಯ ಇರುವ ಭೈರಗೊಂಡನ ಕಾರ್ಗೆ ಟಿಪ್ಪರವೊಂದು ಡಿಕ್ಕಿ ಪಡಿಸಿದೆ. ಅನಂತರ 8 ಜನ ಅಪರಿಚಿತರು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ.
ಈ ಘಟನೆಯಲ್ಲಿ ಮಹಾದೇವ ಸಾಹುಕಾರ ಭೈರಗೊಂಡನಿಗೆ ಎರಡು ಗುಂಡು ತಾಗಿದ್ದು, ಈತನ ಸಹಚರ ಬಾಬುರಾಯ ಮೃತಪಟ್ಟಿದ್ದಾನೆ ಎಂದು ಪೊಲೀಸರ ಮೂಲ ತಿಳಿಸಿದ್ದು, ಕಾರ್ ಚಾಲಕನ ಕಾಲು ಮುರಿದ್ದು, ಇನ್ನಿಬ್ಬರು ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಜಿಲ್ಲಾ ಪೊಲೀಸರು ಘಟನಾ ಸ್ಥಳಕ್ಕೆ ತರಳಿದ್ದಾರೆ.