ವಿಜಯಪುರ: ರಸ್ತೆ ಅಡ್ಡ ಮೋರೆ ಸಿಸಿ ಬೆಡ್ ಕುಸಿದು ಬಿದ್ದ ಗುಂಡಿಯಲ್ಲಿ ಎತ್ತೊಂದು ಸಿಕ್ಕಿಕೊಂಡು ಕೆಲ ಹೊತ್ತು ನರಳಾಡಿದ ಘಟನೆ ಜಿಲ್ಲೆಯ ಇಂಡಿ ತಾಲೂಕಿನ ಶಿರಶ್ಯಾಡ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಗ್ರಾಮದ ರೈತ ಅರವಿಂದ ಬಿರಾದಾರ ಎಂಬವರು ತಮ್ಮ ಜೋಡೆತ್ತಿನ ಗಾಡಿಯೊಂದಿಗೆ ಹೊಲಕ್ಕೆ ತೆರಳುತ್ತಿದ್ದಾಗ, ರಸ್ತೆ ಅಡ್ಡ ಮೋರೆಯ ಸಿಸಿ ಬೆಡ್ ಕುಸಿದು ಬಿದ್ದ ಪರಿಣಾಮ, ಗುಂಡಿಯಲ್ಲಿ ಒಂದು ಎತ್ತು ಸಿಲುಕಿಕೊಂಡಿದೆ. ಇದನ್ನು ಕಂಡು ಅರವಿಂದ ಬಿರಾದಾರ ಗಾಬರಿಗೊಂಡಿದ್ದು, ಗ್ರಾಮಸ್ಥರು ಓಡಿ ಬಂದು ಕಟ್ಟಿಗೆ ಹಾಗೂ ಹಗ್ಗವನ್ನು ಬಳಸಿ, ಗುಂಡಿಯಿಂದ ಎತ್ತನ್ನು ಮೇಲಕ್ಕೆ ಎತ್ತಿದ್ದಾರೆ.
ಕಳಪೆ ಕಾಮಗಾರಿಯಿಂದಲೇ ಇಲ್ಲಿನ ರಸ್ತೆಯ ಅಡ್ಡ ಮೋರೆ ಸಿಸಿ ಬೆಡ್ ಕುಸಿದಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.