Monday, July 4, 2022

Latest Posts

ವಿಜಯಪುರ| ಗೃಹ ಬಳಕೆ ಸಿಲಿಂಡರ್ ನ್ನು ಅಕ್ರಮವಾಗಿ ಆಟೋಗಳಿಗೆ ತುಂಬುತ್ತಿದ್ದ ಆರೋಪಿ ಬಂಧನ

ವಿಜಯಪುರ: ಅಕ್ರಮವಾಗಿ ಗೃಹ ಬಳಕೆ ಸಿಲಿಂಡರ್‌ನ್ನು ಆಟೋಗಳ ಗ್ಯಾಸ್‌ಗೆ ತುಂಬುತ್ತಿದ್ದ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿ, 1,28,200 ರೂ.ಗಳ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಕಲ್ಲಮೇಶ ಚನ್ನಪ್ಪ ಆಳೂರ ಬಂಧಿತ ಆರೋಪಿ.
ಕಲ್ಲಮೇಶ ಆಳೂರ ಈತನು ನಗರದ ಇಂಡಿ ರಸ್ತೆಯ ಜ್ಯೋತಿ ಪ್ಯಾಕ್ಟರಿಯ ಹಿಂಭಾಗದ ಪತ್ರಾಸ ಶೆಡ್‌ನಲ್ಲಿ ಗೃಹ ಬಳಿಕೆ ಸಿಲೆಂಡರ್‌ಗಳನ್ನು ಅಕ್ರಮವಾಗಿ ಆಟೋಗಳಿಗೆ ಗ್ಯಾಸ್ ತುಂಬುತ್ತಿರುವ ಖಚಿತ ಮಾಹಿತಿ ಮೇರೆಗೆ, ಆಹಾರ ಇಲಾಖೆ ನಿರೀಕ್ಷಕರು ಹಾಗೂ ಪೊಲೀಸರು ದಾಳಿ ನಡೆಸಿ, ಆರೋಪಿಯನ್ನು ಬಂಧಿಸಿ, ಸಿಲಿಂಡರ್‌ಗಳನ್ನು ಜಪ್ತಿ ಮಾಡಿದ್ದಾರೆ.
ಈ ಸಂಬಂಧ ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್ ಮಾರ್ಗದರ್ಶನದಲ್ಲಿ ಡಿಸಿಐಬಿ ಪಿಎಸ್‌ಐ ಸಿ.ಬಿ. ಬಾಗೇವಾಡಿ, ಪಿಎಸ್‌ಐ ಐ.ಎಂ. ದುಂಡಸಿ ಹಾಗೂ ಸಿಬ್ಬಂದಿ ತಂಡ ದಾಳಿ ನಡೆಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss