ವಿಜಯಪುರ: ಜಿಲ್ಲೆಯ ಡಿಸಿಸಿ ವಾಟ್ಸಾಫ್ (ಮೀಡಿಯಾ ಮತ್ತು ಟಿವಿ) ಗ್ರೂಪ್ ನಲ್ಲಿ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಅಶ್ಲೀಲ ಚಿತ್ರ ಹರಿಬಿಟ್ಟಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ರವಿಗೌಡ ಪಾಟೀಲ ಉರ್ಫ್ ರವಿಕಾಂತೇಗೌಡ ಪಾಟೀಲ ಧೂಳಖೇಡ ಅವರ ಮೊಬೈಲ್ ನಿಂದ ಅಶ್ಲೀಲ ಚಿತ್ರ ಬಂದಿದ್ದು, ಗ್ರೂಪ್ ನಲ್ಲಿ ಮುಜುಗರ ಮೂಡುವಂತಾಗಿದೆ.
ಡಿಡಿಸಿ ಗ್ರೂಪ್ ಗೆ ಅಶ್ಲೀಲ ಚಿತ್ರ ಹರಿದು ಬಂದಿರುವುದು ಅನಂತರ ನನಗೆ ತಿಳಿದಿದ್ದು, ಮಕ್ಕಳ ಕೈಯಲ್ಲಿ ಮೊಬೈಲ್ ಕೊಟ್ಟು, ನಾನು ಬಾತ್ ರೂಮ್ ಗೆ ಹೋದಾಗ ಇದು ನಡೆದಿರಬಹುದು. ಯಾರೂ ಅನ್ಯತಾ ಭಾವಿಸಬಾರದು. ನಾನು ಸಮಾಜದಲ್ಲಿ ಜವಾಬ್ದಾರಿ ಇರುವ ಮನುಷ್ಯ. ಇದಕ್ಕಾಗಿ ವಿಷಾಧಿಸುವೆ ಎಂದು ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ರವಿಗೌಡ ಪಾಟೀಲ ಪ್ರತಿಕ್ರಿಯಿಸಿದ್ದಾರೆ.