Friday, July 1, 2022

Latest Posts

ವಿಜಯಪುರ| ಚಿನ್ನಾಭರಣ ಕಳವು: ಓರ್ವ ಬಂಧನ, 233 ಗ್ರಾಂ ಚಿನ್ನಾಭರಣ ಜಪ್ತಿ

ವಿಜಯಪುರ: ನಗರದಲ್ಲಿ ಚಿನ್ನಾಭರಣ ಕಳ್ಳತನ ಮಾಡುತ್ತಿದ್ದ ಕಳ್ಳನೊಬ್ಬನನ್ನು ಪೊಲೀಸರು ಬಂಧಿಸಿ, ಅಂದಾಜು ಮೌಲ್ಯ 12.38 ಲಕ್ಷ ರೂ.ಗಳ 233 ಗ್ರಾಂ ಚಿನ್ನಾಭರಣವನ್ನು ಜಪ್ತಿ ಮಾಡಿದ್ದಾರೆ.
ಇಲ್ಲಿನ ಪಾನಿ ನಗರದ ರಾಜು ಶಿವಾನಂದ ಹೊಸಮನಿ (25) ಬಂಧಿತ ಆರೋಪಿ.
ಲಾರಿ ಚಾಲಕನಾಗಿರುವ ರಾಜು ಹೊಸಮನಿ ಈತನು ನಗರದಲ್ಲಿ ಚಿನ್ನಾಭರಣ ಕಳ್ಳತನ ಮಾಡುತ್ತಿದ್ದು, ನಗರದ ಸೊಲ್ಲಾಪುರ ನಾಕಾ ಬಳಿ ಸಂಶಯಾಸ್ಪದವಾಗಿ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ. ಈತನನ್ನು ವಿಚಾರಣೆಗೆ ಒಳಪಡಿಸಿದಾಗ, ನಗರದ 4 ಮನೆಗಳಲ್ಲಿ ಚಿನ್ನಾಭರಣ ಕಳ್ಳತನ ಮಾಡಿರುವ ಕುರಿತು ಬಾಯಿಬಿಟ್ಟಿದ್ದಾನೆ.
ಈತನಿಂದ ಆದರ್ಶನಗರ ಠಾಣೆ, ಜಲನಗರ ಠಾಣಾ ಹಾಗೂ ಗೋಳಗುಮ್ಮಟ ಠಾಣಾ ವ್ಯಾಪ್ತಿಯ ಮನೆಗಳಲ್ಲಿ ಚಿನ್ನಾಭರಣ ಕಳ್ಳತನ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಅಂದಾಜು ಮೌಲ್ಯ 12.38 ಲಕ್ಷ ರೂ.ಗಳ 233 ಗ್ರಾಂ ಚಿನ್ನಾಭರಣವನ್ನು ಜಪ್ತಿ ಮಾಡಲಾಗಿದ್ದು, ಕೃತ್ಯಕ್ಕೆ ಬಳಸಿದ್ದ ಬೈಕ್‌ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ ಅರಸಿದ್ದಿ, ಡಿವೈಎಸ್‌ಪಿ ಲಕ್ಷ್ಮೀ ನಾರಾಯಣ ಮಾರ್ಗದರ್ಶನದಲ್ಲಿ, ಗೋಳಗುಮ್ಮಟ ಠಾಣೆ ಸಿಪಿಐ ಬಸವರಾಜ ಮುಕರ್ತಿಹಾಳ ನೇತೃತ್ವದ ಆದರ್ಶ ನಗರ ಠಾಣೆ ಪಿಎಸ್‌ಐ ಎಸ್.ಬಿ. ಆಜೂರ, ಎಸ್.ಎಸ್. ಮಾಳೆಂಗಾವ ಸಿಬ್ಬಂದಿ ತಂಡ ಆರೋಪಿಯನ್ನು ಬಂಧಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss