Sunday, August 14, 2022

Latest Posts

ವಿಜಯಪುರ| ಜಿಲ್ಲೆಗೆ ಆಗಮಿಸಿದ 1348 ವಲಸೆ ಕಾರ್ಮಿಕರಿಗೆ ಕ್ವಾರಂಟೈನ್

ವಿಜಯಪುರ: ಮಹಾರಾಷ್ಟ್ರದಿಂದ ಸಿಂಧುದುರ್ಗ ಮೂಲಕ 1348 ವಲಸೆ ಕಾರ್ಮಿಕರು ಜಿಲ್ಲೆಗೆ ಶುಕ್ರವಾರ ಬೆಳಗ್ಗೆ ಆಗಮಿಸಿದ್ದು, ನಗರದ ರೈಲ್ವೆ ನಿಲ್ದಾಣದಲ್ಲಿ ಸಕಲ ಮುಂಜಾಗೃತೆಯೊAದಿಗೆ ಜಿಲ್ಲೆಯ ವಿವಿಧ ಭಾಗಗಳಿಗೆ ಜಿಲ್ಲಾಡಳಿತ ಕಾರ್ಮಿಕರನ್ನು ಕಳುಹಿಸಿಕೊಡಲಾಯಿತು.
ಈ ಕಾರ್ಮಿಕರು ನಗರ ಸೇರಿದಂತೆ ಜಿಲ್ಲೆಯ 12 ತಾಲೂಕು ಕೇಂದ್ರಗಳಿಗೆ ಕರೆದೊಯ್ಯಲು 41 ಬಸ್‌ಗಳ ವ್ಯವಸ್ಥೆ ಮಾಡಲಾಗಿದ್ದು, ರೈಲ್ವೇ ನಿಲ್ದಾಣಕ್ಕೆ ಆಗಮಿಸಿದ ಸಂದರ್ಭ ಅಲ್ಪೋಪಹಾರ, ಕುಡಿಯುವ ನೀರು, ಬಿಸ್ಕೇಟ್‌ಗಳ ವ್ಯವಸ್ಥೆಯೊಂದಿಗೆ ಅಲ್ಪೋಪಹಾರ ಪಾರ್ಸಲ್ ಪ್ಯಾಕೇಟ್‌ಗಳನ್ನು ಪ್ರಯಾಣಿಕರಿಗೆ ಜಿಲ್ಲಾಡಳಿತದ ನೀಡಿತು.
ಮಹಾರಾಷ್ಟoದಿಂದ ಆಗಮಿಸಿದ ವಲಸೆ ಕಾರ್ಮಿಕರಿಗೆ ತಾಲೂಕು ಕೇಂದ್ರ‍್ರಗಳಲ್ಲಿ ಥರ್ಮಲ್ ಸ್ಕ್ರಿನಿಂಗ್ ಸೇರಿದಂತೆ ಆರೋಗ್ಯ ತಪಾಸಣೆಗೆ ಕ್ರಮ ಕೈಗೊಳ್ಳಲಾಗಿದೆ. ಅದರಂತೆ ಜಿಲ್ಲಾದ್ಯಂತ ಈ ಎಲ್ಲ ಪ್ರಯಾಣಿಕರ ಕ್ವಾರಂಟೈನ್‌ಗೂ ಜಿಲ್ಲಾಡಳಿತದ ವತಿಯಿಂದ ಸಕಲ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಪ್ರಯಾಣಿಕರನ್ನು ಕರೆದೋಯ್ದ ಪ್ರತಿ ಬಸ್‌ಗೆ ಓರ್ವ ನೋಡೆಲ್ ಅಧಿಕಾರಿ, ಚಾಲಕ, ನಿರ್ವಾಹಕರನ್ನು ಪಿಪಿಇ ಕಿಟ್, ಮಾಸ್ಕ್, ಸ್ಯಾನಿಟೈಸರ್‌ಗಳೊಂದಿಗೆ ಅವಶ್ಯಕ ಮುನ್ನೆಚ್ಚರಿಕೆ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಂಡಿದೆ.
ಈ ಸಂದರ್ಭ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಮಾತನಾಡಿ, ಸಿಂಧದುರ್ಗದಿಂದ 1348 ಜನರು ಶ್ರಮಿಕ್ ರೈಲ್ವೆ  ಮೂಲಕ ಜಿಲ್ಲೆಗೆ ಆಗಮಿಸಲಿರುವ ಕುರಿತು ಸಂಪೂರ್ಣ ಮಾಹಿತಿ ಸಂಗ್ರಹಿಸಲಾಗಿತ್ತು. ಅದರಂತೆ ಇದಕ್ಕೆ ಸಂಬಂಧಪಟ್ಟತೆ ರೈಲ್ವೆ  ನಿಲ್ದಾಣದಲ್ಲಿಯೇ 1348 ಜನರ ಆರೋಗ್ಯ ತಪಾಸಣೆ ಸೇರಿದಂತೆ ತಪಾಸಣೆಗೆ ಅನಾನುಕೂಲವಾಗಬಹುದೆಂಬ ದೃಷ್ಟಿಯಿಂದ 12 ನಿಗದಿತ ತಾಲೂಕುಗಳಲ್ಲಿ ಅವರ ಆರೋಗ್ಯ ತಪಾಸಣೆ ವ್ಯವಸ್ಥೆ ಮಾಡಲಾಗಿದೆ ಎಂದರು.
ಎಸ್ಪಿ ಅನುಪಮ್ ಅಗರವಾಲ್ ಮಾತನಾಡಿ, ಸಿಂಧದುರ್ಗದಿoದ 1348 ಜನರು ಶ್ರಮಿಕ್ ರೈಲ್ವೆ  ಮೂಲಕ ಜಿಲ್ಲೆಗೆ ಆಗಮಿಸುವ ಹಿನ್ನೆಲೆಯಲ್ಲಿ ಅವರನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗಲು ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್ ಮಾಡಲಾಗಿದೆ. ಸಾಮಾಜಿಕ ಅಂತರ ನಿಯಮ ಉಲ್ಲಂಘನೆಯಾಗದoತೆ ನಿಗಾ ಇಡಲಾಗಿದೆ ಎಂದರು.
ಸಿಇಒ ಗೋವಿಂದ ರೆಡ್ಡಿ, ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ್, ಕೆಎಸ್‌ಆರ್‌ಟಿಸಿ ವಿಭಾಗಿಯ ನಿಯಂತ್ರಣಾಧಿಕಾರಿ ಗಂಗಾಧರ, ಮಹಾನಗರ ಪಾಲಿಕೆ ಆಯುಕ್ತ ಹರ್ಷಾ ಶಟ್ಟಿ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss