ಹೊಸ ದಿಗಂತ ವರದಿ, ವಿಜಯಪುರ:
ಕೊರೋನಾ ಸೋಂಕಿನ ಮದ್ದು, ಕೋವಿಡ್ ನಿರೋಧಕ ಲಸಿಕೆ ಕೋವಿಶೀಲ್ಡ್ ಅನ್ನು ವಿಶೇಷ ವಾಹನದಲ್ಲಿ ಗುರುವಾರ ಜಿಲ್ಲೆಗೆ ತರಲಾಗಿದೆ.
ಒಟ್ಟು 9,500 ಡೋಸ್ ಕೋವಿಶಿಲ್ಡ್ ಇರುವ ಲಸಿಕಾ ವಾಹನ, ಬಾಗಲಕೋಟೆಯಿಂದ ನಗರದ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಗೆ ಸಂಜೆ ತಲುಪಿದೆ. ಸದ್ಯ ಜಿಲ್ಲಾ ಮಟ್ಟದ ಉಗ್ರಾಣದಲ್ಲಿ, ಸುರಕ್ಷಿತವಾಗಿ ಇರಿಸಲಾಗಿದೆ.
ಈ ಸಂದರ್ಭ ಡಿಎಚ್ಒ ಮಹೇಂದ್ರ ಕಾಪ್ಸೆ, ಡಾ.ನಾಗರಬೆಟ್ಟ, ಪ್ರವೀಣ ಹೊಳಿ ಸೇರಿದಂತೆ ಮತ್ತಿತರರು ಇದ್ದರು.