Wednesday, July 6, 2022

Latest Posts

ವಿಜಯಪುರ ಜಿಲ್ಲೆಯಲ್ಲಿ ಕಾಲಿಟ್ಟ ಕಡೆ ಕಂಟೇನ್ಮೆಂಟ್ ಝೋನ್!

ವಿಜಯಪುರ: ನಗರ ಸೇರಿದಂತೆ ಜಿಲ್ಲೆಯಲ್ಲಿ ಕೊರೋನಾ ಅಟ್ಟಹಾಸ ಹೆಚ್ಚಳಗೊಳ್ಳುತ್ತಿದ್ದು, ಕಾಲಿಟ್ಟ ಕಡೆ ಕಂಟೇನ್ಮೆಂಟ್ ಝೋನ್‌ಗಳೇ ಕಂಡು ಬರುತ್ತಿವೆ.
ಕೆಲ ದಿನಗಳ ಹಿಂದೆ ಬೆರಳೆಣಿಕೆಯಷ್ಟು ಸೋಂಕಿತರ ಪ್ರಕರಣ ಪತ್ತೆಯಾಗುತ್ತಿದ್ದವು. ಆದರೆ ಸದ್ಯ ದಿನವೊಂದಕ್ಕೆ 52, 86, 89 ರಂತೆ ಕೊರೋನಾ ಪ್ರಕರಣ ಪತ್ತೆಯಾಗುತ್ತ ಒಂದೆಡೆ ಆತಂಕ ಮೂಡಿಸಿದರೆ, ಇನ್ನೊಂದೆಡೆ ಕಂಟೇನ್ಮೆಂಟ್ ಝೋಗಳ ಸಂಖ್ಯೆ ಕೂಡ ಏರಿಕೆಯಾಗುತ್ತಿದೆ.
ಜಿಲ್ಲೆಯಲ್ಲಿ ಈವರೆಗೆ ಒಟ್ಟು 256 ಕಂಟೇನ್ಮೆಂಟ್ ಝೋನ್‌ಗಳಿದ್ದು, ಇವುಗಳಲ್ಲಿ 169 ಚಾಲ್ತಿಯಲ್ಲಿದ್ದರೆ, 87 ಝೋನ್‌ಗಳನ್ನು ತೆರವುಗೊಳಿಸಲಾಗಿದೆ.
ನಗರದಲ್ಲಿ 117ರ ಪೈಕಿ 99 ಝೋನ್‌ಗಳು ಚಾಲ್ತಿಯದ್ದು, 18 ಝೋನ್‌ಗಳನ್ನು ತೆರವುಗೊಳಿಸಲಾಗಿದೆ. ಇಲ್ಲಿನ ತಾಜ್‌ಬಾವಡಿ, ರಾಜಾಜಿನಗರ, ಮೆಹಬುಬ್ ನಗರ (ಕೆಎಚ್‌ಬಿ), ಗೋಳಗುಮ್ಮಟ ಎದುರು, ಗಿಸಾಡಿ ಓಣಿ ಇಚಿಡಿ ರಸ್ತೆ, ಅಪ್ಸರಾ ಥಿಯೇಟರ್, ಸಕಾಫ್ ರೋಜಾ, ನವಭಾಗ, ನಾಗರಬೌಡಿ, ಜುಮ್ಮಾ ಮಸೀದಿ ಹಿಂಭಾಗ, ಶಿಕಾರಖಾನೆ, ಶಿಕಾರಖಾನೆ ಸ್ಟೇಶನ್ ಬ್ಯಾಕ್ ರೋಡ್, ರಾಮಪ್ರಸಾದ ಗಲ್ಲಿ, ಉಪಲಿ ಬುರ್ಜ್, ಉಪಲಿ ಬುರ್ಜ್ ಹತ್ತಿರ, ಐನಾಪುರ ಕ್ರಾಸ್ ಜಲನಗರ, ಶಾಹಪೇಟಿ ಗಲ್ಲಿ, ಯೋಗಾಪುರ ಕಾಲೋನಿ, ರೇಲ್ವೆ ಪೊಲೀಸ್ ಸ್ಟೇಶನ್, ಶಾಂತಿನಗರ, ಹಿಂಗುಲಾಂಬಿಕಾ ಕಾಲೋನಿ, ಜೋರಾಪುರ ಪೇಠ, ಕೀರ್ತಿ ನಗರ, ಖಾಜಾ ನಗರ ದಕ್ಷಿಣಮ, ಶಿವಾಜಿ ವೃತ್ತ, ಇಬ್ರಾಹಿಂ ನಗರ ಹತ್ತಿರ, ವೆಂಕಟೇಶ ನಗರ, ಮೈನಾರಿಟಿ ಹಾಸ್ಟೇಲ್ ಟಕ್ಕೆ, ಲಕ್ಷ್ಮೀ ಗುಡಿ, ಯಶೋಧಾ ಆಸ್ಪತ್ರೆ ಏರಿಯಾ, ಅಲ್ಲಾಪುರ ಕಾಲೋನಿ, ರಾಜಾಜಿ ನಗರ ದಕ್ಷಿಣ, ಮುರಾಣಕೇರಿ ಗಲ್ಲಿ, ಗವಾರ ಗಲ್ಲಿ, ಜೋರಾಪುರ ಪೇಠ, ಶಾಲಿಹುಸೇನ/ ರಹಿಮ ನಗರ, ಆದಿಲಶಾಹ ನಗರ, ಸಾಯಿ ಪಾರ್ಕ್, ನೆಹರು ನಗರ ರುಮಾಲ್ ಬೌಡಿ, ಎನ್‌ಆರ್‌ಐ ಕ್ಯಾಂಪಸ್ ಬಿಎಲ್‌ಡಿಇ ಕ್ಯಾಂಪಸ್, ಸಿಬ್ಬಂದಿ ಕ್ವಾಟರ್ಸ್ ಬಿಎಲ್‌ಡಿಇ ಕ್ಯಾಂಪಸ್, ಗುಂಬಜ್ ಗಲ್ಲಿ ಹಕೀಮ್ ಚೌಕ್, ಪೈಲವಾನ ಗಲ್ಲಿ, ವಿದ್ಯಾನಗರ ರಹಿಮನಗರ, ಅಡಕಿ ಗಲ್ಲಿ ಜೋರಾಪುರ ಪೇಠ, ಗಚ್ಚಿನಕಟ್ಟಿ ಕಾಲೋನಿ, ಶಾರದಾ ಶಾಲೆ ಸಾಯಿಪಾರ್ಕ್, ಖಾಜಾಮೀನ ದರ್ಗಾ, ಟಕ್ಕೆ, ಕುಂಬಾರ ಗಲ್ಲಿ, ತೋಂಟದಾರಿ ಮಠ ಗಣೇಶ ನಗರ, ಪಿಡಬ್ಲ್ಯೂ ಡಿ ಕ್ವಾಟರ್ಸ್, ಮೀನಾಕ್ಷಿ ಚೌಕ್, ದಿವಟಗೇರಿ ಓಣಿ, ಸಾಯಿಬಾಬಾ ಗುಡಿ ಸಾಯಿಪಾರ್ಕ್, ಹಮಾಲ ಕಾಲೋನಿ, ನಿಸಾರ ಮಡ್ಡಿ, ಬಾಗವಾನ ಆಸ್ಪತ್ರೆ ಹಿಂಭಾಗ ಸಕಾಫ್ ರೋಜಾ, ಮಹಿಳಾ ವಿವಿ, ಭಾವಸಾರ ನಗರ, ಗೋಕುಲ ಪಾರ್ಕ್ ಸಾಯಿಪಾರ್ಕ್, ಜಿಲ್ಲಾಸ್ಪತ್ರೆ ಕ್ವಾಟರ್ಸ್, ಎಸ್‌ಆರ್ ಕಾಲೋನಿ, ಕನಕದಾಸ ಬಡಾವಣೆ-1, ಗುರುದೇವ ನಗರ, ಕನಕದಾಸ ಬಡಾವಣೆ-3, ಪೇಟಿ ಬೌಡಿ, ಬಾಗವಾನ ಗಲ್ಲಿ, ಸಾಸನೂರ ಆಸ್ಪತ್ರೆ ಹತ್ತಿರ, ಶಾಸ್ತ್ರಿ ನಗರ, ಗಾಂಧಿ ಶಾಲೆ ಗ್ಯಾಂಗ್ ಬಾವಡಿ, ಪೊಲೀಸ್ ಹೆಡ್ ಕ್ವಾಟರ್ಸ್, ಪುಲಕೇಶ ನಗರ, ಜೈಭೀಮ ನಗರ ಮನಗೂಳಿ ಅಗಸಿ, ತ್ರಿಮೂರ್ತಿ ನಗರ, ಕಾಬ್ರಾಜಿ ಬಜಾರ್ ಬಾರಾಕಮಾನ, ಬಾಲಜಿ ಗುಡಿ ಮಹಾವೀರ ರಸ್ತೆ, ಆಶ್ರಮ ಗೇಟ್ ಎದುರು ಆಶ್ರಮ, ಅಕ್ಕಿ ಕಾಲೋನಿ -2, ಸ್ವಾತಂತ್ರ್ಯ ಕಾಲೋನಿ ಬಸ್ ಸ್ಟಾಪ್ ಹತ್ತಿರ, ಮಠಪತಿ ಗಲ್ಲಿ, ಸ್ಪಿನ್ನಿಂಗ್ ಮಿಲ್ ಬುರಣಾಪುರ ರಸ್ತೆ, ಸಿದ್ಧೇಶ್ವರ ಗುಡಿ ಹಿಂಭಾಗ ಆದರ್ಶ ನಗರ, ಕೆಸಿನಗರ ಡಿಸಿಸಿ ಬ್ಯಾಂಕ್ ಹತ್ತಿರ, ರೇಡಿಯೋ ಕೇಂದ್ರ ಎದುರ, ಗಿರಿಮಲ್ಲೇಶ್ವರ ಕಾಲೋನಿ ಅಥಣಿ ರಸ್ತೆ, ಧನವಂತ್ರಿ ಕ್ರಾಸ್ ಮರಾಠಿ ವಿದ್ಯಾಲಯ, ಜೈ ಕರ್ನಾಟಕ ಕಾಲೋನಿ ಸಿಂದಗಿ ನಾಕಾ, ಕೆಎಸ್‌ಆರ್‌ಟಿಸಿ ಕಾಲೋನಿ ಲಿ-ಗ್ರಾö್ಯಂಡ ಹೋಟೆಲ್ ಹಿಂಭಾಗ, ಕಡೇಚೂರ ಕಾಂಪ್ಲೇಕ್ಸ್ ಇನಾಮದಾರ ಕಾಲೋನಿ, ಕಾಳಿಕಾ ನಗರ ಆಶ್ರಮ, ಕಿಡ್ನಿ ಫೌಂಡೇಶನ್ ಹತ್ತಿರ ಸೊಲ್ಲಾಪುರ ರಸ್ತೆ, ಆಸಾರ ಗಲ್ಲಿ, ರಾಯಲ್ ಹೋಟೆಲ್ ಹಿಂಭಾಗ, ವಿದ್ಯಾನಗರ, ಕಾಲೇಭಾಗ ಜಖಂಡಿ ರಸ್ತೆ, ಐಶ್ವರ್ಯಾ ನಗರ, ಗಣೇಶ ನಗರ ದಕ್ಷಿಣ, ಗೋಳಗುಮ್ಮಟ ಪೊಲೀಸ್ ಕ್ವಾಟರ್ಸ್, ಭಾರತ ಈಜುಕೊಳ ಹತ್ತಿರ, ವೀರಭದ್ರ ನಗರ, ಸಿದ್ಧೇಶ್ಚರ ಕಾಲೋನಿ, ಕತ್ನಳ್ಳಿ, ಕನ್ನೂರ, ಖತೀಜಾಪುರ, ಕವಲಗಿ ಸೇರಿದಂತೆ ಜಿಲ್ಲೆಯಾದ್ಯಂತ ಕೊರೋನಾ ಸೋಂಕು ತನ್ನ ಕಬಂಧ ಬಾಹು ಚಾಚುತ್ತ, ಜಿಲ್ಲೆಯ ಜನರಲ್ಲಿ ತಲ್ಲಣ ಮೂಡಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss