ವಿಜಯಪುರ: ಜಿಲ್ಲೆಯಲ್ಲಿ ಗುರುವಾರ 113 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ನಾಲ್ವರು ಮೃತಪಟ್ಟಿರುವುದು ಸೇರಿದಂತೆ ಸೋಂಕಿತರ ಸಂಖ್ಯೆ 5260 ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಹೇಳಿದರು.
ಈ ಕುರಿತು ಮಾಹಿತಿ ನೀಡಿದ ಅವರು, ಜಿಲ್ಲೆಯಲ್ಲಿ 64 ವರ್ಷದ ವೃದ್ಧ (ಪಿ 216851), 63 ವರ್ಷದ ವೃದ್ಧ (ಪಿ 216860), 62 ವರ್ಷದ ವೃದ್ಧ (ಪಿ 180159) ಹಾಗೂ 70 ವರ್ಷದ ವೃದ್ಧ (ಪಿ 203175) ಸೇರಿದಂತೆ ನಾಲ್ಕು ಜನರು ಕೊರೋನಾ ಸೋಂಕಿಗೆ ಮೃತಪಟ್ಟಿದ್ದು, ಇಲ್ಲಿವರೆಗೆ 66 ಜನರು ಸಾವಿಗೀಡಾಗಿದ್ದಾರೆ. ಇಂದು ಮತ್ತೆ 150 ರೋಗಿಗಳು ಗುಣಮುಖಗೊಂಡು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, ಈವರೆಗೆ 4332 ರೋಗಿಗಳು ಗುಣಮುಖಗೊಂಡು ಮನೆಗೆ ತೆರಳಿದ್ದಾರೆ. ಇನ್ನೂ 862 ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.