Sunday, July 3, 2022

Latest Posts

ವಿಜಯಪುರ ಜಿಲ್ಲೆಯಲ್ಲಿ ಭಾನುವಾರ 9 ಜನರಲ್ಲಿ ಕೊರೋನಾ ಪತ್ತೆ, ಸೋಂಕಿತರು 202ಕ್ಕೆ ಏರಿಕೆ

ವಿಜಯಪುರ: 6 ವರ್ಷದ ಬಾಲಕಿ ಸೇರಿದಂತೆ ಜಿಲ್ಲೆಯಲ್ಲಿ ಭಾನುವಾರ 9 ಜನರಲ್ಲಿ ಸೋಂಕು ದೃಢಪಟ್ಟಿದ್ದು, ಆರು ಜನರು ಸಾವಿಗೀಡಾಗಿರುವುದು ಸೇರಿದಂತೆ ಸೋಂಕಿತರ ಸಂಖ್ಯೆ 202 ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಹೇಳಿದರು.
ಈ ಕುರಿತು ಮಾಹಿತಿ ನೀಡಿದ ಅವರು, ನಗರದ ಕಂಟೇನ್ಮೆಂಟ್ ಏರಿಯಾದ ಇಬ್ಬರಲ್ಲಿ ಹಾಗೂ ಮಹಾರಾಷ್ಟ್ರದಿಂದ ಆಗಮಿಸಿರುವ 7 ಜನರಲ್ಲಿ ಸೋಂಕು ಪತ್ತೆಯಾಗಿದೆ. 26 ವರ್ಷದ ಯುವಕ (5425), 13 ವರ್ಷದ ಬಾಲಕ (5426), 8 ವರ್ಷದ ಬಾಲಕಿ (5427), 28 ವರ್ಷದ ಮಹಿಳೆ (5428), 22 ವರ್ಷದ ಮಹಿಳೆ (5429), 18 ವರ್ಷದ ಬಾಲಕ (5430), 30 ವರ್ಷದ ವ್ಯಕ್ತಿ (5431), 6 ವರ್ಷದ ಬಾಲಕಿ (5432) ಹಾಗೂ 30 ವರ್ಷದ ಮಹಿಳೆ (5433) ಸೇರಿದಂತೆ ಒಟ್ಟು 9 ಜನರಲ್ಲಿ ಸೋಂಕು ದೃಢಪಟ್ಟಿದೆ. ಸೋಂಕಿನಿಂದ ಬಳಲುತ್ತಿದ್ದ 68 ರೋಗಿಗಳು ಗುಣಮುಖಗೊಂಡು ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಇನ್ನುಳಿದ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss