Thursday, July 7, 2022

Latest Posts

ವಿಜಯಪುರ ಜಿಲ್ಲೆಯಲ್ಲಿ ಮಂಗಳವಾರ 64 ಮಂದಿಗೆ ಕೊರೋನಾ ದೃಢ, 220 ಮಂದಿ ಗುಣಮುಖ

ವಿಜಯಪುರ: ಜಿಲ್ಲೆಯಲ್ಲಿ ಮಂಗಳವಾರ 64 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಮತ್ತೆ ಮೂವರು ಮೃತಪಟ್ಟಿರುವುದು ಸೇರಿದಂತೆ ಸೋಂಕಿತರ ಸಂಖ್ಯೆ 5040 ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಹೇಳಿದರು.
ಈ ಕುರಿತು ಮಾಹಿತಿ ನೀಡಿದ ಅವರು, 65 ವರ್ಷದ (ಪಿ 186323) ವೃದ್ಧೆ, 53 ವರ್ಷದ (ಪಿ 209831) ವ್ಯಕ್ತಿ ಹಾಗೂ 45 ವರ್ಷದ (ಪಿ 216876) ವ್ಯಕ್ತಿ ಸೇರಿದಂತೆ ಮೂವರು ಕೊರೋನಾ ಸೋಂಕಿಗೆ ಸಾವಿಗೀಡಾಗಿದ್ದು, ಜಿಲ್ಲೆಯಲ್ಲಿ ಇಲ್ಲಿವರೆಗೆ ಕೊರೋನಾಗೆ 60 ಜನರು ಅಸುನೀಗಿದಂತಾಗಿದೆ. ಇಂದು ಮತ್ತೆ 220 ರೋಗಿಗಳು ಗುಣಮುಖಗೊಂಡು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, ಈವರೆಗೆ 4163 ರೋಗಿಗಳು ಗುಣಮುಖಗೊಂಡು ಮನೆಗೆ ತೆರಳಿದ್ದಾರೆ. ಇನ್ನೂ 817 ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss