Thursday, August 11, 2022

Latest Posts

ವಿಜಯಪುರ ಜಿಲ್ಲೆಯಲ್ಲಿ ಶುಕ್ರವಾರ 118 ಮಂದಿಗೆ ಸೋಂಕು ದೃಢ, 49 ಮಂದಿ ಗುಣಮುಖ, 5 ಮಂದಿ ಸಾವು

ವಿಜಯಪುರ: ಜಿಲ್ಲೆಯಲ್ಲಿ ಶುಕ್ರವಾರ ಮತ್ತೆ 118 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 2890 ಕ್ಕೆ ಏರಿಕೆಯಾಗಿದೆ.
ಇಂದು 49 ರೋಗಿಗಳು ಗುಣಮುಖಗೊಂಡು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, ಇಲ್ಲಿವರೆಗೆ 2061 ರೋಗಿಗಳು ಗುಣಮುಖಗೊಂಡು ಮನೆಗೆ ತೆರಳಿದ್ದಾರೆ. ಇನ್ನೂ 795 ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಕೊರೋನಾ ಅಟ್ಟಹಾಸಕ್ಕೆ 5 ಮಂದಿ ಮೃತಪಟ್ಟಿದ್ದು, ಈವರೆಗೆ ಮೃತಪಟ್ಟವರ ಸಂಖ್ಯೆ 34 ಕ್ಕೆ ಏರಿಕೆಯಾಗಿದೆ.
ಜಿಲ್ಲೆಯ 64 ವರ್ಷದ ವೃದ್ದೆ (ಪಿ 78796), 86 ವರ್ಷದ ವೃದ್ಧೆ (ಪಿ 81475), 86 ವರ್ಷದ ವೃದ್ಧ (ಪಿ 82514), 55 ವರ್ಷದ ಮಹಿಳೆ (ಪಿ 113184), 65 ವರ್ಷದ ವೃದ್ಧೆ (117287) ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವುದರ ಜೊತೆಗೆ, ಸೋಂಕಿಗೆ ಮೃತಪಟ್ಟವರ ಸಂಖ್ಯೆಯೂ ಏರಿಕೆಯಾಗುತ್ತಿರುವುದು ಸಾರ್ವಜನಿಕರ ಆತಂಕಕ್ಕೀಡು ಮಾಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss