Wednesday, August 10, 2022

Latest Posts

ವಿಜಯಪುರ ಜಿಲ್ಲೆಯಲ್ಲಿ ಸೋಮವಾರ 102 ಮಂದಿಗೆ ಕೊರೋನಾ ದೃಢ, 90 ಮಂದಿ ಗುಣಮುಖ

ವಿಜಯಪುರ: ಜಿಲ್ಲೆಯಲ್ಲಿ ಸೋಮವಾರ 102 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಇಬ್ಬರು ವೃದ್ಧರು ಮೃತಪಟ್ಟಿರುವುದು ಸೇರಿದಂತೆ ಸೋಂಕಿತರ ಸಂಖ್ಯೆ 8635 ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಹೇಳಿದರು.
ಈ ಕುರಿತು ಮಾಹಿತಿ ನೀಡಿದ ಅವರು, ಜಿಲ್ಲೆಯಲ್ಲಿ ಕೊರೋನಾಗೆ 85 ವರ್ಷದ ವೃದ್ಧ (ಪಿ. 467848), 70 ವರ್ಷದ ವೃದ್ಧ (ಪಿ. 384030) ಸೇರಿದಂತೆ ಇಬ್ಬರು ಸಾವಿಗೀಡಾಗಿದ್ದು, ಇಲ್ಲಿವರೆಗೆ 148 ಜನರು ಅಸುನೀಗಿದ್ದಾರೆ. ಇಂದು ಮತ್ತೆ 90 ರೋಗಿಗಳು ಗುಣಮುಖಗೊಂಡು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, ಈವರೆಗೆ 7686 ರೋಗಿಗಳು ಗುಣಮುಖಗೊಂಡು ಮನೆಗೆ ತೆರಳಿದ್ದಾರೆ. ಇನ್ನೂ 801 ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss