Monday, August 8, 2022

Latest Posts

ವಿಜಯಪುರ ಜಿಲ್ಲೆಯಲ್ಲಿ 140 ಮಂದಿಗೆ ಕೊರೋನಾ ದೃಢ, 108 ಮಂದಿ ಗುಣಮುಖ

ವಿಜಯಪುರ: ಜಿಲ್ಲೆಯಲ್ಲಿ ಮಂಗಳವಾರ 140 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಮತ್ತೆ ನಾಲ್ವರು ಮೃತಪಟ್ಟಿರುವುದು ಸೇರಿದಂತೆ ಸೋಂಕಿತರ ಸಂಖ್ಯೆ 5946 ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಹೇಳಿದರು.
ಈ ಕುರಿತು ಮಾಹಿತಿ ನೀಡಿದ ಅವರು, ಜಿಲ್ಲೆಯಲ್ಲಿ ಕೊರೋನಾ ಸೋಂಕಿಗೆ ಮತ್ತೆ ನಾಲ್ಕು ಜನರು ಸಾವಿಗೀಡಾಗಿರುವುದು ಸೇರಿದಂತೆ ಇಲ್ಲಿವರೆಗೆ ಮೃತಪಟ್ಟವರ ಸಂಖ್ಯೆ 85 ಕ್ಕೆ ಏರಿಕೆಯಾಗಿದೆ. ಇಂದು ಮತ್ತೆ 108 ರೋಗಿಗಳು ಗುಣಮುಖಗೊಂಡು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, ಇಲ್ಲಿವರೆಗೆ 5001 ರೋಗಿಗಳು ಗುಣಮುಖಗೊಂಡ ಮನೆಗೆ ತೆರಳಿದ್ದಾರೆ. ಇನ್ನೂ 860 ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss