Tuesday, June 28, 2022

Latest Posts

ವಿಜಯಪುರ| ಡೋಣಿ ನದಿ ಸೇತುವೆಯಲ್ಲಿ ಸಿಕ್ಕ ಎತ್ತಿನ ಬಂಡಿ, ತಪ್ಪಿದ ಭಾರೀ ಅನಾಹುತ

ವಿಜಯಪುರ: ತುಂಬಿ ಹರಿಯುತ್ತಿದ್ದ ಡೋಣಿ ನದಿ ಸೇತುವೆ ಲೆಕ್ಕಿಸದೇ ದಾಟಲು ಮುಂದಾದ ಎತ್ತಿನ ಬಂಡಿ ನಡು ನೀರಲ್ಲಿ ಸಿಲುಕಿಕೊಂಡಿದ್ದು, ಗ್ರಾಮಸ್ಥರ ಸಮಯ ಪ್ರಜ್ಞೆಯಿಂದ ಜೀವಹಾನಿ ಸಂಭವಿಸುವ ಭಾರೀ ಅನಾಹುತ ತಪ್ಪಿದ ಘಟನೆ ಬುಧವಾರ ಮಧ್ಯಾಹ್ನ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯಲ್ಲಿ ಮಂಗಳವಾರ ಸುರಿದ ಭಾರೀ ಮಳೆಯಿಂದಾಗಿ ತಾಳಿಕೋಟೆ- ಹಡಗಿನಾಳ ಸಂಪರ್ಕದ ಡೋಣಿ ನದಿ ತುಂಬಿ ಹರಿಯುತ್ತಿದೆ. ಇಂತಹ ಸಂದರ್ಭ ಜೋಡು ಎತ್ತಿನ ಬಂಡಿಯೊಂದಿಗೆ ಸವಾರರು ಸೇತುವೆ ದಾಟಲು ಯತ್ನಿಸಿದ್ದು, ನಡು ನೀರಿಗೆ ಎತ್ತಿನ ಬಂಡಿ ಸಾಗುತ್ತಿದ್ದಂತೆ, ನೀರು ಹೆಚ್ಚಾಗಿ, ಹರಿವು ತೀವ್ರಗೊಂಡಾಗ, ಒಂದು ಎತ್ತು ಸೇತುವೆ ಕೆಳಭಾಗಕ್ಕೆ ಜಾರಿಕೊಂಡಿದೆ. ಆಗ ಎತ್ತಿನ ಬಂಡಿಯವರು ಗಾಬರಿಗೊಂಡು ಒದ್ದಾಡುತ್ತಿರುವುದನ್ನು ಕಂಡ ಗ್ರಾಮಸ್ಥರು, ಕೂಡಲೇ ದೌಡಾಯಿಸಿ, ಎತ್ತಿನ ಬಂಡಿಯನ್ನು ಎಳೆದು ದಡಕ್ಕೆ ತಂದಿದ್ದಾರೆ. ಕೆಲ ಕ್ಷಣದಲ್ಲೇ ಆಗುತ್ತಿದ್ದ ಭಾರೀ ಅನಾಹುತ, ಗ್ರಾಮಸ್ಥರ ಸಮಯ ಪ್ರಜ್ಞೆಯಿಂದ ತಪ್ಪಿದ್ದಂತಾಗಿದೆ.
ಗ್ರಾಮಸ್ಥರ ಆಕ್ರೋಶ 
ಇಲ್ಲಿನ ಡೋಣಿ ನದಿಗೆ ಅಡ್ಡಲಾಗಿ ಕಟ್ಟುತ್ತಿರುವ ಸೇತುವೆ ಕಾಮಗಾರಿ ಇನ್ನೂ ನಿರ್ಮಾಣ ಹಂತದಲ್ಲಿದ್ದು, ಟೆಂಡರ್ ಅವಧಿ ಮುಗಿದಿದ್ದರೂ ಕೂಡ ಸೇತುವೆ ಕಾಮಗಾರಿ ಪೂರ್ಣಗೊಂಡಿಲ್ಲ. ಕೂಡಲೇ ಸೇತುವೆ ಕಾಮಗಾರಿ ಪೂರ್ಣಗೊಳಿಸಿ, ಆಗುವ ಇಂತಹ ಅನಾಹುತಗಳನ್ನು ತಪ್ಪಿಸಬೇಕು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss