Wednesday, August 17, 2022

Latest Posts

ವಿಜಯಪುರ| ದರ್ಗಾ ಜೈಲಿಗೆ ಪೊಲೀಸರ ದಾಳಿ: ಮೊಬೈಲ್, ಬೀಡಿ, ತಂಬಾಕು ಜಪ್ತಿ

ವಿಜಯಪುರ: ಇಲ್ಲಿನ ಕೇಂದ್ರ ಕಾರಾಗೃಹ ದರ್ಗಾ ಜೈಲಿಗೆ ಜಿಲ್ಲಾ ಪೊಲೀಸರು ಗುರುವಾರ ಬೆಳಗ್ಗೆ ದಿಢೀರ್ ದಾಳಿ ನಡೆಸಿ, ಮೊಬೈಲ್, ತಂಬಾಕು, ಬೀಡಿ, ಸಿಗರೆಟ್ ಗಳನ್ನು ಜಪ್ತಿ ಮಾಡಿದ್ದಾರೆ.

ಕಾನೂನು ಬಾಹಿರವಾಗಿ ಜೈಲಿನಲ್ಲಿ ಮೂರು ಮೊಬೈಲ್, ಚಾರ್ಜರ್, ಬೀಡಿ, ಸಿಗರೆಟ್, ತಂಬಾಕು ಇಟ್ಟುಕೊಂಡಿದ್ದ ಕೈದಿಗಳ ಮಾಹಿತಿ ಮೇರೆಗೆ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ ಅರಸಿದ್ಧಿ ನೇತೃತ್ವದಲ್ಲಿ ದರ್ಗಾ ಜೈಲ್‌ ಮೇಲೆ ಪೊಲೀಸರು ದಾಳಿ ಮಾಡಿದ್ದು, ಈ ವೇಳೆ ಪತ್ತೆಯಾಗಿರುವ ಮೊಬೈಲ್ ನಲ್ಲಿ ಕೈದಿಗಳು ಯಾರ ಜೊತೆಗೆ ಸಂಪರ್ಕ ಹೊಂದಿದ್ದರು ಎನ್ನುವ ವಿಚಾರಣೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!