Monday, August 8, 2022

Latest Posts

ವಿಜಯಪುರ| ದಲಿತ ಯುವಕ ದೇವಸ್ಥಾನ ಕಟ್ಟೆ ಮೇಲೆ ಕುಳಿತಿದ್ದಕ್ಕೆ ಬರ್ಬರ ಹತ್ಯೆ

ವಿಜಯಪುರ: ಜಿಲ್ಲೆಯ ಸಿಂದಗಿ ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ಈಚೆಗೆ ಯುವಕನೊಬ್ಬನ ಕಣ್ಣಿಗೆ ಖಾರದ ಪುಡಿ ಎರಚಿ ಹಾಡ ಹಗಲೇ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮತ್ತೊಂದು ತಿರುವು ಪಡೆದುಕೊಂಡಿದೆ. ಕೊಲೆಯಾದ ಯುವಕ ಅನಿಲ ಇಂಗಳಗಿ (28) ಈತ, ಬೂದಿಹಾಳ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದ ಕಟ್ಟೆ ಮೇಲೆ ಕುಳಿತಿದ್ದಕ್ಕೆ, ದಲಿತನಾಗಿ ನಮ್ಮ ಸರಿ ಸಮಾನ ಕೊಡುತ್ತೀಯಾ ಎಂದು ಗ್ರಾಮದ ಸಿದ್ದು ಬಿರಾದಾರ, ಸಂತೋಷ ಹಿರ್ಲಾಕುಂಡ ಎಂಬವರು ಗಲಾಟೆ ಮಾಡಿದ್ದರು. ಈ ಗಲಾಟೆ ನಡೆದ ಎರಡು ದಿನಗಳ ಬಳಿಕ, ಅನಿಲ ಇಂಗಳಗಿಗೆ ಆರೋಪಿಗಳಾದ ಸಿದ್ದು ಬಿರಾದಾರ, ಸಂತೋಷ ಹಿರ್ಲಾಕುಂಡ ಎಂಬವರು ಕಣ್ಣಿಗೆ ಖಾರದ ಪುಡಿ ಎರಚಿ, ಬರ್ಬರ ಕೊಲೆ ಮಾಡಿದ್ದಾರೆ ಎಂದು ಮೃತ ಯುವಕನ ತಂದೆ ಶರಣಪ್ಪ ಸಾಯಬಗೊಂಡ ಇಂಗಳಗಿ ದೂರು ನೀಡಿದ್ದಾರೆ ಎಂದು ಎಸ್ಪಿ ಅನುಪಮ್ ಅಗರವಾಲ್ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss