ವಿಜಯಪುರ: ನಗರದಲ್ಲಿ ಮತ್ತೊಂದು ಸೋಂಕಿತ ಪ್ರಕರಣ ಭಾನುವಾರ ಪತ್ತೆಯಾಗಿದ್ದು, ನಾಲ್ವರು ಸಾವಿಗೀಡಾಗಿರುವುದು ಸೇರಿದಂತೆ ಸೋಂಕಿತರ ಸಂಖ್ಯೆ 69 ಕ್ಕೆ ಏರಿಕೆ ಆಗಿದೆ.
ಇಲ್ಲಿನ P2011ರ 80 ವರ್ಷದ ವೃದ್ಧನಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ತೀವ್ರ ಉಸಿರಾಟ, ಮಧುಮೇಹ ಸೇರಿದಂತೆ ಇತರ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿರುವ ವೃದ್ಧನಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.