Wednesday, June 29, 2022

Latest Posts

ವಿಜಯಪುರ ನಗರದಲ್ಲಿ ಸೋಮವಾರ ಏಕಾಏಕಿ 11 ಕೊರೋನಾ ಸೋಂಕಿತ ಪ್ರಕರಣ ಪತ್ತೆ

ವಿಜಯಪುರ: ನಗರದಲ್ಲಿ ಸೋಮವಾರ ಏಕಾಏಕಿ 11 ಕೊರೋನಾ ಸೋಂಕಿತರ ಪ್ರಕರಣ ಪತ್ತೆಯಾಗಿದ್ದು, ಇಬ್ಬರು ಮೃತಪಟ್ಟಿರುವುದು ಸೇರಿದಂತೆ ಈ ಹಿಂದೆ 21 ಇದ್ದ ಪ್ರಕರಣ 32 ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಹೇಳಿದರು.
ಈ ಕುರಿತು ಸೋಮವಾರ ಮಾಹಿತಿ ನೀಡಿದ ಅವರು, ಪೇಶಂಟ್ ನಂಬರ್ 221 ರ ಸಂಪರ್ಕದಿ0ದ 7 ಜನರಿಗೆ, ಪೇಶಂಟ್ ನಂಬರ್ 362 ರ ಸಂಪರ್ಕದಿ0ದ 3 ಜನರಿಗೆ ಹಾಗೂ ಪೇಶಂಟ್ ನಂಬರ್ 228 ರ ಸಂಪರ್ಕದಿ0ದ ಓರ್ವರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಸೋಂಕಿತರಿಗೆ ಕೋವಿಡ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದರು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss