Thursday, July 7, 2022

Latest Posts

ವಿಜಯಪುರ| ಪಂಚಮಸಾಲಿ 2A ಮೀಸಲಾತಿಗಾಗಿ ಡಿ.23 ರಂದು ರಕ್ತ ದಾಸೋಹ: ಸಂಗಮೇಶ ಬಬಲೇಶ್ವರ

ಹೊಸದಿಗಂತ ವರದಿ,ವಿಜಯಪುರ:

ಕೂಡಲಸಂಗಮ ಪಂಚಮಸಾಲಿ ಪೀಠಾಧ್ಯಕ್ಷ ಜಯಮೃತ್ಯುಂಜಯ ಸ್ವಾಮಿಜೀ ಜನ್ಮದಿನಾಚರಣೆ ನಿಮಿತ್ತ ‘ಕೊಡುತ್ತೇವೆ ರಕ್ತ, ಪಡೆಯುತ್ತೇವೆ ಮೀಸಲಾತಿ’ ಎಂಬ ಕಾರ್ಯಕ್ರಮ ಡಿ. 23 ರಂದು ರಾಜ್ಯಾದ್ಯಂತ ಭಕ್ತರು ಹಾಗೂ ಅಭಿಮಾನಿಗಳು ನಡೆಸುವಂತೆ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದ ರಾಷ್ಟ್ರೀಯ ವಕ್ತಾರ ಸಂಗಮೇಶ ಬಬಲೇಶ್ವರ ಕರೆ ನೀಡಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ರಾಜ್ಯಾದ್ಯಂತ ರಕ್ತದಾಸೋಹ ಮಾಡೋಣ, ಸರ್ಕಾರವನ್ನು ಎಚ್ಚರಗೊಳಿಸೋಣ. ಅಲ್ಲದೇ, ನಮ್ಮ‌ ಪಂಚಮಸಾಲಿ ಸಮಾಜಕ್ಕೆ 2A ಮೀಸಲಾತಿಗಾಗಿ ಹೋರಾಡೋಣ ಎಂದರು.

ಇನ್ನು ಕೊರೋನಾ ವೈರಸ್ ಭೀತಿ ಹಾಗೂ ಪ್ರವಾಹದಿಂದಾಗಿ ರೈತರ ಬೆಳೆಗಳು ನಾಶವಾಗಿ, ಸಂಕಷ್ಟದಲ್ಲಿ ಇದ್ದಾರೆ. ಹೀಗಾಗಿ ಜನ್ಮ ದಿನ ಆಚರಿಸದಂತೆ ಸ್ವಾಮಿಜೀಯವರು,
ಭಕ್ತಾದಿಗಳು ಹಾಗೂ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ಆದರೆ, ರಕ್ತ ಕೊಡುತ್ತೇವೆ ಮೀಸಲಾತಿ ಪಡೆಯೋಣ ಎಂದು ತಮ್ಮ ತಮ್ಮ ಸ್ಥಳೀಯ ಆಸ್ಪತ್ರೆಯಲ್ಲಿ ರಕ್ತದಾಸೋಹ ಮಾಡುವ ಮೂಲಕ ಫೇಸ್‌ಬುಕ್‌ ಹಾಗೂ ವಾಟ್ಸಾಪ್ (ನಂ. 7259191848) ಗೆ ಫೋಟೊ ಕಳಿಸುವಂತೆ ಮನವಿ ಮಾಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss