Tuesday, August 9, 2022

Latest Posts

ವಿಜಯಪುರ| ಪಡಿತರ ಧಾನ್ಯ ಸಮೇತ ಲಾರಿ ಕಳ್ಳತನ ಮಾಡಿದ ಇಬ್ಬರು ಆರೋಪಿಗಳ ಬಂಧನ

ವಿಜಯಪುರ: ಪಡಿತರ ಧಾನ್ಯ ತುಂಬಿದ ಲಾರಿ ಸಮೇತ ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ, 7.50 ಲಕ್ಷ ರೂ. ಕಿಮ್ಮತ್ತಿನ ಲಾರಿ ಹಾಗೂ 12.67 ಲಕ್ಷ ರೂ.ಗಳ ಮೌಲ್ಯದ ಅಕ್ಕಿ ಚೀಲವನ್ನು ಜಪ್ತಿ ಮಾಡಿದ್ದಾರೆ.
ಇಲ್ಲಿನ ಅಲಕುಂಟೆ ನಗರದ ರಾಹುಲ್ ಶಂಕರ ಪವಾರ (33), ರಮೇಶ ರಾಮಯ್ಯ (66) ಬಂಧಿತ ಆರೋಪಿಗಳು.
ಆರೋಪಿಗಳಾದ ರಾಹುಲ್ ಪವಾರ, ರಮೇಶ ರಾಮಯ್ಯ ಈ ಇಬ್ಬರು ಸೇರಿಕೊಂಡು, ನಗರ ಹೊರ ವಲಯ ಎನ್‌ಎಚ್-13 ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ ಸರ್ಕಾರಿ ಪಡಿತರ ಧಾನ್ಯ ತುಂಬಿದ ಲಾರಿ (ಕೆಎ-28, ಬಿ-0203) ಯನ್ನು ಜು.31, 2020 ರಂದು ಕಳ್ಳತನವಾದ ಕುರಿತು ಗೋಳಗುಮ್ಮಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್ ಹಾಗೂ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ ಅರಸಿದ್ದಿ ಮಾರ್ಗದರ್ಶನದಲ್ಲಿ, ಡಿವೈಎಸ್‌ಪಿ ಲಕ್ಷ್ಮೀನಾರಾಯಣ ನೇತೃತ್ವದಲ್ಲಿ ಗೋಳಗುಮ್ಮಟ ಸಿಪಿಐ ಬಸವರಾಜ ಮುಕರ್ತಿಹಾಳ, ಪಿಎಸ್‌ಐ ರಾಜೇಶ ಲಮಾಣಿ ಹಾಗೂ ಸಿಬ್ಬಂದಿಗಳು ಆರೋಪಿಗಳನ್ನು ಬಂಧಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss