Friday, July 1, 2022

Latest Posts

ವಿಜಯಪುರ| ಪ್ರಪಂಚ ಸಾಹಿತ್ಯ ಚರಿತ್ರೆಯಲ್ಲಿ ರಾಮಾಯಣಕ್ಕೆ ವಿಶೇಷ ಸ್ಥಾನವಿದೆ: ಯಂಡಿಗೇರಿ

ವಿಜಯಪುರ: ಪ್ರಪಂಚದ ಸಾಹಿತ್ಯ ಚರಿತ್ರೆಯಲ್ಲಿ ರಾಮಾಯಣಕ್ಕೆ ಒಂದು ವಿಶೇಷ ಸ್ಥಾನವನ್ನು ಒದಗಿಸಿದ ಶ್ರೇಯಸ್ಸು ಆದಿಕವಿ ವಾಲ್ಮೀಕಿ ಮಹರ್ಷಿಗೆ ಸಲ್ಲುತ್ತದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಹೇಳಿದರು.
ನಗರದ ಜೆಡಿಎಸ್ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಾಲ್ಮೀಕಿ ಮಹರ್ಷಿ ಕೂಡ ಸರ್ವತೋಮುಖಿ ಚಿಂತಕ, ಚರಿತ್ರೆಗಾರ, ಸಮಾಜ ಸುಧಾರಕ, ಶಿಕ್ಷಣ ತಜ್ಞ, ರಾಜನೀತಿ ತಜ್ಞ, ತತ್ವಜ್ಞಾನಿ ಹಾಗೂ ಆದಿ ಕವಿಯಾಗಿದ್ದು, ಬಹು ವೈವಿಧ್ಯಮಯವಾಗಿ ಜನರ ಮಸೂರೆಗೊಂಡಿದ್ದಾರೆ. ಇಂತಹ ಮಹಾನ್ ಮಹರ್ಷಿಯ ಹೆಸರು ಜಗತ್ತಿಗೆ ಪರಿಚಯವಾದದ್ದು, ರಾಮಾಯಣ ಮಹಾಕಾವ್ಯದ ಮೂಲಕ ಎಂದರು.
ಹೀಗಾಗಿ ವಾಲ್ಮೀಕಿ ಮಹರ್ಷಿಯನ್ನು ಸಾಧಕ ಗುಣದ ಶ್ರೇಷ್ಠ ಸಂತ ಎಂದು ಹೇಳಬಹುದು. ಅವರ ತತ್ವ ಮತ್ತು ಆದರ್ಶಗಳನ್ನು ಇಂದಿನ ರಾಜಕಾರಣಿಗಳು ಅಳವಡಿಸಿಕೊಂಡು, ಸಮಾಜಮುಖಿಯಾದ ಕೆಲಸ ಕಾರ್ಯಗಳನ್ನು ಮಾಡಬೇಕು ಎಂದರು.
ಈ ಸಂದರ್ಭ ಚಂದ್ರಕಾಂತ ಹಿರೇಮಠ, ಕೌಸರ್ ಶೇಖ, ಎಸ್.ಎ. ಕಿಣಗಿ, ಎಸ್.ವೈ. ನಡುವಿನಕೇರಿ, ಸೋಮು ಉಪ್ಪಾರ, ರಾಜು ಹಿಪ್ಪರಗಿ, ಶಿವಕಾಂತ ಕುಂಬಾರ, ಜಾಫರ್ ಕಲಾದಗಿ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss