ವಿಜಯಪುರ: ಬೈಕ್, ಕಾರ್ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲಿಯೇ ಸಾವಿಗೀಡಾದ ಘಟನೆ ಜಿಲ್ಲೆಯ ಬಬಲೇಶ್ವರ ಹೊರ ಭಾಗದ ಹಲಗಣಿ ರಸ್ತೆ ಬಳಿ ಭಾನುವಾರ ಸಂಭವಿಸಿದೆ.
ಮೃತಪಟ್ಟವರನ್ನು ಬಬಲೇಶ್ವರ ತಾಲೂಕಿನ ಶೇಗುಣಸಿ ಗ್ರಾಮದ ಸಂಗಯ್ಯ ಗುರುಬಸಯ್ಯ ಹಿರೇಮಠ (45), ಶಂಕರಯ್ಯ ಬಸಲಿಂಗಯ್ಯ ಹಿರೇಮಠ (55) ಎಂದು ಗುರುತಿಸಲಾಗಿದೆ.
ಸಂಗಯ್ಯ ಹಿರೇಮಠ, ಶಂಕರಯ್ಯ ಹಿರೇಮಠ ಈ ಇಬ್ಬರು ಬಬಲೇಶ್ವರದಿಂದ ಶೇಗುಣಿಸಿ ಕಡೆಗೆ ಬೈಕ್ನಲ್ಲಿ ತೆರಳುತ್ತಿದ್ದಾಗ ಅಪಘಾತ ನಡೆದಿದ್ದು, ಈ ಘಟನೆಯಲ್ಲಿ ಬೈಕ್ ಸವಾರರಿಬ್ಬರಿಗೆ ತೀವ್ರ ಪೆಟ್ಟಾಗಿದಕ್ಕೆ ಇಬ್ಬರು ಸ್ಥಳದಲ್ಲಿಯೇ ಅಸುನೀಗಿದ್ದು, ಕಾರ್ನಲ್ಲಿದ್ದ ವಿಜಯಪುರದ ಅಕ್ಷಯ ಹಾಗೂ ರಮೇಶನಿಗೆ ಗಂಭೀರ ಗಾಯವಾಗಿದೆ.
ಈ ಸಂಬಂಧ ಬಬಲೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.