ವಿಜಯಪುರ: ಮಹಾಮಾರಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಳಗೊಳ್ಳುತ್ತಿರುವುದಕ್ಕೆ ಕಡಿವಾಣ ಹಾಕಲು ಕರ್ಫ್ಯೂ ಘೋಷಣೆ ಮಾಡಿದ ಹಿನ್ನೆಲೆ ಭಾನುವಾರ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸಂಪೂರ್ಣ ಕಾರ್ಯಚಟುವಟಿಕೆ ಸ್ಥಗಿತಗೊಂಡು, ಇಡೀ ಜಿಲ್ಲೆಯೆ ಸ್ತಬ್ಧಗೊಂಡಿತು.
ಈ ಹಿಂದೆ ಲಾಕ್ಡೌನ್ಗೂ ಮುನ್ನ ಒಮ್ಮೆ ವಿಧಿಸಲಾಗಿದ್ದ ಜನತಾ ಕರ್ಫ್ಯೂ ಬಳಿಕ, ಕೊರೋನಾ ಸೋಂಕು ನಿಯಂತ್ರಣಕ್ಕಾಗಿ ಒಂದೂವರೆ ತಿಂಗಳ ಕಾಲ ಕಟ್ಟುನಿಟ್ಟಿನ ಲಾಕ್ಡೌನ್ ಹೇರಲಾಯಿತು. ಅನಂತರ ಲಾಕ್ಡೌನ್ ಸಡಿಲಿಸಿ, ಹಲವು ವಲಯದ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲಾಯಿತು. ಈ ಸಂದರ್ಭ ನಗದ ವ್ಯವಸ್ಥೆ ಮತ್ತೆ ಸಹಜ ಸ್ಥಿತಿಗೆ ಬಂದಿತ್ತು, ದಿನನಿತ್ಯವೂ ವಾಹನಗಳ ಓಡಾಟ, ಆಟೋ ಸಂಚಾರ ಸಹಜ ಸ್ಥಿತಿಗೆ ಬಂದಿತ್ತು. ಆದರೆ ಮತ್ತೆ ಭಾನುವಾರ ಕರ್ಫ್ಯೂ ಘೋಷಣೆಯಿಂದ ನಗರದ ಪ್ರಮುಖ ರಸ್ತೆ ಹಾಗೂ ಮಾರುಕಟ್ಟೆ ಜನ ಸಂಚಾರವಿಲ್ಲದೆ ಸಂಪೂರ್ಣ ಖಾಲಿ ಖಾಲಿಯಾಗಿ ಕಂಡು ಬಂತು.
ಬಿಕೋ ಎನ್ನುವ ರಸ್ತೆ:
ಅವಶ್ಯಕ, ತುರ್ತು ಸೇವೆಗಳಿಗೆ ತೆರಳುವವರ ಬೈಕ್ಗಳನ್ನು ಹೊರತುಪಡಿಸಿದರೆ ನಗರದ ರಸ್ತೆಗಳು ಸಂಪೂರ್ಣ ಬಿಕೋ ಎನ್ನುತ್ತಿದ್ದವು. ಭಾನುವಾರ ಬ್ಯಾಂಕ್ ಹಾಗೂ ಸರ್ಕಾರಿ ಕಚೇರಿಗಳಿಗೂ ರಜೆ ಇರುವುದರಿಂದ ನೌಕರಸ್ಥರು ಕೂಡ ರಸ್ತಗೆ ಇಳಿಯಲಿಲ್ಲ. ನಿತ್ಯ ಜನಸಂದಣಿ ಇರುವ ಕೇಂದ್ರ ಬಸ್ ನಿಲ್ದಾಣ, ಕೆಸಿ ಮಾರುಕಟ್ಟೆ, ಗಾಂಧಿಚೌಕ್ ರಸ್ತೆಗಳು ಸಂಪೂರ್ಣ ಬಿಕೋ ಎನ್ನುತ್ತಿದ್ದವು. ಶನಿವಾರ ರಾತ್ರಿಯಿಂದಲೇ ಕರ್ಫ್ಯೂ ಘೋಷಣೆಯಾಗಿದ್ದರಿಂದ ನಿನ್ನೆಯಿಂದಲೇ ಜನರ ಸಂಚಾರ ವಿರಳವಾಗಿತ್ತು. ಅಲ್ಲದೆ ಭಾನುವಾರ ದಿನವಿಡೀ ಸ್ತಬ್ಧಗೊಂಡಿದ್ದು, ಯಾವೊಂದು ಖಾಸಗಿ ವಾಹನ, ಬಸ್, ಕಾರ್, ಬೈಕ್ ಹಾಗೂ ಆಟೋರಿಕ್ಷಾಗಳು ರಸ್ತೆಗೆ ಬರಲಿಲ್ಲ. ಪಾರ್ಸಲ್ ಸೌಲಭ್ಯ ಇದ್ದ ಹೋಟೆಲ್ಗಳು ಸಹ ಬಾಗಿಲು ಹಾಕಿದ್ದವು.
ಇಲ್ಲಿನ ಶಾಸ್ತಿç ಮಾರುಕಟ್ಟೆಯ ಅಂಗಡಿ, ಮುಂಗಟ್ಟು, ಸರಾಫ್ ಬಜಾರ್, ಜನತಾ ಬಜಾರ್ ಸೇರಿದಂತೆ ಕೆಸಿ ಮಾರುಕಟ್ಟೆಗಳ ಅಂಗಡಿಗಳನ್ನು ಸಂಪೂರ್ಣ ಬಂದ್ ಮಾಡಲಾಗಿತ್ತು.
ಇಲ್ಲಿನ ಕೇಂದ್ರ ಬಸ್ ನಿಲ್ದಾಣದಲ್ಲಿ ಸುದೀರ್ಘ ದಿನಗಳ ಬಳಿಕ ಬಸ್ ಸಂಚಾರ ಆರಂಭಗೊAಡು, ಓಡಾಡುತ್ತಿದ್ದ ಬಸ್ಗಳು ಭಾನುವಾರ ಮತ್ತೆ ಮೂಲೆಗೆ ಸೇರಿದ್ದವು. ಹೀಗಾಗಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಲ್ಲದೆ, ಬಸ್ಗಳ ಓಡಾಟವಿಲ್ಲದೆ ಇಡೀ ಆವರಣ ಬಿಕೋ ಎನ್ನುತ್ತಿತ್ತು.
ಅಲ್ಲಲ್ಲಿ ಬ್ಯಾರಿಕೇಡ್:
ಕರ್ಫ್ಯೂ ಘೋಷಣೆ ಹಿನ್ನೆಲೆ ನಗರದ ಕೆಲವಡೆ ಪೊಲೀಸ್ ಇಲಾಖೆ ವತಿಯಿಂದ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಲಾಗಿತ್ತು. ತುರ್ತು ಅವಶ್ಯಕತೆಗೆ ಸಂಚರಿಸುವವರ ಐಡಿ ಕಾರ್ಡ್ನ್ನು ಪೊಲೀಸರು ಪರಿಶೀಲಿಸುತ್ತಿದ್ದರು. ನಗರದ ವಿವಿಧಡೆ ಗಸ್ತು ತಿರುಗುತ್ತ, ನಗರಾದ್ಯಂತ ಅಲ್ಲಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಕರ್ಫ್ಯೂ ಮುನ್ನವೇ ಹಬ್ಬದ ಖರೀದಿ:
ಭಾನುವಾರ ಸಂಪೂರ್ಣ ಕರ್ಫ್ಯೂ ವಿಧಿಸಲಾಗುತ್ತಿದೆ ಎನ್ನುವ ಸುದ್ದಿ ತಿಳಿಯುತ್ತಿದ್ದಂತೆ, ರಂಜಾನ್ ಹಬ್ಬಕ್ಕೆ ಕಳೆದೆರಡು ದಿನಗಳಿಂದಲೇ ಹಬ್ಬಕ್ಕೆ ಬೇಕಾಗುವ ವಸ್ತುಗಳನ್ನು ಖರೀದಿಸಲಾಗಿದೆ.
ಹೊಸ ಬಟ್ಟೆ, ಬರೆ ಸೇರಿದಂತೆ ರಂಜಾನ್ ಹಬ್ಬದ ತಯಾರಿಯನ್ನು ಈಗಾಗಲೇ ಮಾಡಿಕೊಳ್ಳಲಾಗಿದ್ದು, ಕೊರೋನಾದ ವಿಷಮ ಪರಿಸ್ಥಿತಿಯಲ್ಲಿ ಕೆಲವರು ಅತಿ ಸರಳ ರೀತಿಯಲ್ಲಿ ಹಬ್ಬವನ್ನು ಆಚರಿಸಲು ಮುಂದಾಗುತ್ತಿದ್ದಾರೆ ಎನ್ನುವುದು ತಿಳಿದು ಬಂದಿದೆ.