Saturday, July 2, 2022

Latest Posts

ವಿಜಯಪುರ | ಭಾನುವಾರ 26 ಮಂದಿಯಲ್ಲಿ ಕೊರೋನಾ ಪಾಸಿಟಿವ್ , ಸೋಂಕಿತರ ಸಂಖ್ಯೆ 122ಕ್ಕೆ ಏರಿಕೆ

ವಿಜಯಪುರ: ಜಿಲ್ಲೆಯಲ್ಲಿ ಭಾನುವಾರ 26 ಸೋಂಕಿತ ಪ್ರಕರಣ ಪತ್ತೆಯಾಗಿದ್ದು, ಐವರು ಸಾವಿಗೀಡಾಗಿರುವುದು ಸೇರಿದಂತೆ ಸೋಂಕಿತರ ಸಂಖ್ಯೆ 122 ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಹೇಳಿದರು.
ನಗರದಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಮಹಾರಾಷ್ಟ್ರದಿಂದ ಆಗಮಿಸಿದ 2 ವರ್ಷದ ಬಾಲಕ ಸೇರಿದಂತೆ 26 ಕಾರ್ಮಿಕರಲ್ಲಿ ಸೋಂಕು ದೃಢಪಟ್ಟಿದೆ. ರೋಗಿ ಸಂಖ್ಯೆ 2923ರ 70 ವರ್ಷದ ವೃದ್ಧ, ರೋಗಿ ಸಂಖ್ಯೆ 2924ರ 55 ವರ್ಷದ ವ್ಯಕ್ತಿ, ರೋಗಿ ಸಂಖ್ಯೆ 2925ರ 55 ವರ್ಷದ ಮಹಿಳೆ, ರೋಗಿ ಸಂಖ್ಯೆ 2926ರ 38 ವರ್ಷದ ವ್ಯಕ್ತಿ, ರೋಗಿ ಸಂಖ್ಯೆ 2927ರ 28 ವರ್ಷದ ಮಹಿಳೆ, ರೋಗಿ ಸಂಖ್ಯೆ 2928ರ 38 ವರ್ಷದ ವ್ಯಕ್ತಿ, ರೋಗಿ ಸಂಖ್ಯೆ 2929ರ 30 ವರ್ಷದ ವ್ಯಕ್ತಿ, ರೋಗಿ ಸಂಖ್ಯೆ 3011ರ 51 ವರ್ಷದ ಪುರುಷ, ರೋಗಿ ಸಂಖ್ಯೆ 3013ರ 15 ವರ್ಷದ ಬಾಲಕ, ರೋಗಿ ಸಂಖ್ಯೆ 3014ರ 46 ವರ್ಷದ ವ್ಯಕ್ತಿ, ರೋಗಿ ಸಂಖ್ಯೆ 3151ರ 4 ವರ್ಷದ ಬಾಲಕಿ, ರೋಗಿ ಸಂಖ್ಯೆ 3152ರ 45 ವರ್ಷದ ಮಹಿಳೆ, ರೋಗಿ ಸಂಖ್ಯೆ 3153ರ 35 ವರ್ಷದ ಮಹಿಳೆ, ರೋಗಿ ಸಂಖ್ಯೆ 3154ರ 23 ವರ್ಷದ ಮಹಿಳೆ, ರೋಗಿ ಸಂಖ್ಯೆ 3157ರ 22 ವರ್ಷದ ವ್ಯಕ್ತಿ, ರೋಗಿ ಸಂಖ್ಯೆ 3171ರ 33 ವರ್ಷದ ವ್ಯಕ್ತಿ, ರೋಗಿ ಸಂಖ್ಯೆ 3172ರ 59 ವರ್ಷದ ವ್ಯಕ್ತಿ, ರೋಗಿ ಸಂಖ್ಯೆ 3173ರ 37 ವರ್ಷದ ವ್ಯಕ್ತಿ, ರೋಗಿ ಸಂಖ್ಯೆ 3174ರ 5 ವರ್ಷದ ಬಾಲಕ, ರೋಗಿ ಸಂಖ್ಯೆ 3175ರ 2 ವರ್ಷದ ಬಾಲಕ, ರೋಗಿ ಸಂಖ್ಯೆ 3176ರ 20 ವರ್ಷದ ಯುವತಿ, ರೋಗಿ ಸಂಖ್ಯೆ 3177ರ 54 ವರ್ಷದ ಮಹಿಳೆ, ರೋಗಿ ಸಂಖ್ಯೆ 3178ರ 30 ವರ್ಷದ ಮಹಿಳೆ, ರೋಗಿ ಸಂಖ್ಯೆ 3179ರ 22 ವರ್ಷದ ಮಹಿಳೆ, ರೋಗಿ ಸಂಖ್ಯೆ 3180ರ 25 ವರ್ಷದ ಮಹಿಳೆ, ರೋಗಿ ಸಂಖ್ಯೆ 3181ರ 3 ವರ್ಷದ ಬಾಲಕಿಗೆ ಸೋಂಕು ದೃಢಪಟ್ಟಿದೆ ಎಂದು ಹೇಳಿದರು.
ಈಗಾಗಲೇ ಸೋಂಕಿನಿಂದ ಬಳಲುತ್ತಿದ್ದ 55 ಸೋಂಕಿತರು ಗುಣಮುಖಗೊಂಡಿದ್ದು, ಇನ್ನುಳಿದ ಸೋಂಕಿತರಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss