Thursday, August 11, 2022

Latest Posts

ವಿಜಯಪುರ| ಭಾರಿ ಮಳೆ, ಗಾಳಿಗೆ 25 ಎಕರೆ ಬಾಳೆ ನಷ್ಟ

ವಿಜಯಪುರ: ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಗಬೇನಾಳ, ವೀರೇಶನಗರ ಗ್ರಾಮದಲ್ಲಿ ಭಾರಿ ಮಳೆ, ಗಾಳಿಗೆ ಸುಮಾರು 30ಕ್ಕೂ ಹೆಚ್ಚು ರೈತರ 25 ಎಕರೆಯ ಬಾಳೆ ಬೆಳೆ ನೆಲಕ್ಕೆ ಉರುಳಿ ನಾಶವಾಗಿದೆ.

ಸೋಮವಾರ ರಾತ್ರಿ ಬೀಸಿದ ಭಾರಿ ಗಾಳಿ ಮತ್ತು ಮಳೆಗೆ ಅಪಾರ ಪ್ರಮಾಣದ ರೈತರ ಬಾಳೆ ಗಿಡ ನೆಲಕ್ಕುರುಳಿದೆ. ಸಾಲ ಸೂಲ ಮಾಡಿ ಬೆಳೆದ ಬಾಳೆಯ ಫಸಲು ಇನ್ನೇನು ಕೈಗೆ ಬರುವಷ್ಟರಲ್ಲಿ ರೈತರಿಗೆ ಆಘಾಟ ಉಂಟು ಮಾಡಿದೆ.

ಒಟ್ಟು 30 ರೈತರ ಬಾಳೆ ಬೆಳೆ ಸಂಪೂರ್ಣ ನಾಶವಾಗಿದೆ. ಕೊರೋನಾ ಕರಿನೆರಳು ಮತ್ತು ಪ್ರಕೃತಿ ವಿಕೋಪಕ್ಕೆ ಸಿಲುಕಿ ರೈತರು ಕಂಗಾಲಾಗಿದ್ದಾರೆ.

ಬಾಳೆ ಫಸಲು ಪ್ರಕೃತಿ ವಿಕೋಪಕ್ಕೆ ನಾಶವಾದ ಬಾಳೆ ಬೆಳೆಗೆ ಸರ್ಕಾರ ಸೂಕ್ತ ಪರಿಹಾರ ವದಗಿಸಬೇಕು ಎಂದು ರೈತರು ಒತ್ತಾಯಿಸುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss