ವಿಜಯಪುರ: ಜಿಲ್ಲೆಯಲ್ಲಿ ಮಂಗಳವಾರ ಮತ್ತೆ 16 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಈ ಪೈಕಿ 3 ಸೋಂಕಿತರು ತೀವ್ರ ನಿಗಾ ಘಟಕದಲ್ಲಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಈಗಾಗಲೇ ಸೋಂಕಿನಿಂದ 7 ಜನರು ಮೃತಪಟ್ಟಿದ್ದು, ಸೋಂಕಿತರ ಸಂಖ್ಯೆ 317 ಕ್ಕೆ ಏರಿಕೆಯಾಗಿದೆ. ಇಂದು ಬಿಡುಗಡೆಯಾದ ವೈದ್ಯಕೀಯ ವರದಿಯಲ್ಲಿ, 28 ವರ್ಷದ ಯುವತಿ (ಪಿ 9706), 60 ವರ್ಷದ ವೃದ್ಧೆ (ಪಿ 9707), 16 ವರ್ಷದ ಯುವತಿ (ಪಿ 9708), 43 ವರ್ಷದ ವ್ಯಕ್ತಿ (ಪಿ 9709), 44 ವರ್ಷ ವ್ಯಕ್ತಿ (ಪಿ 9710), 20 ವರ್ಷದ ಯುವಕ (ಪಿ 9711), 31 ವರ್ಷದ ವ್ಯಕ್ತಿ (ಪಿ 9712), 20 ವರ್ಷದ ಯುವಕ (ಪಿ 9713), 38 ವರ್ಷದ ಮಹಿಳೆ (ಪಿ 9714), 46 ವರ್ಷದ ಪುರುಷ (ಪಿ 9715), 38 ವರ್ಷದ ಪುರುಷ (ಪಿ 9716), 75 ವರ್ಷದ ವೃದ್ಧೆ (ಪಿ 9717), 38 ವರ್ಷದ ವ್ಯಕ್ತಿ (ಪಿ 9718), 27 ವರ್ಷದ ಪುರುಷ (ಪಿ 9719), 31 ವರ್ಷದ ಮಹಿಳೆ (ಪಿ 9720) ಹಾಗೂ 23 ವರ್ಷದ ಯುವತಿ (ಪಿ 9721) ಸೇರಿದಂತೆ 16 ಜನರಲ್ಲಿ ಸೋಂಕು ಪತ್ತೆಯಾಗಿದೆ.
ಇಂದು 2 ರೋಗಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, ಇಲ್ಲಿವರೆಗೆ 222 ರೋಗಿಗಳು ಗುಣಮುಖಗೊಂಡು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಇನ್ನುಳಿದ ಸೋಂಕಿತರಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.