Saturday, August 13, 2022

Latest Posts

ವಿಜಯಪುರ| ಮಗನಿಗೆ ಕೊರೋನಾ ತಗುಲಿದೆ ಎನ್ನುವ ಭಯದಲ್ಲಿ ತಾಯಿ ಹೃದಯಾಘಾತದಿಂದ ಸಾವು

ವಿಜಯಪುರ: ನ್ಯೂಮೋನಿಯಾ ತೊಂದರೆಯಿಂದ ಬಳಲುತ್ತಿದ್ದ ತಮ್ಮ ಹಿರಿಯಪುತ್ರನಿಗೆ ಕೊರೋನಾ ಸೋಂಕು ತಗುಲಿದೆ ಎಂದು ಭಾವಿಸಿ ಮಾನಸಿಕಮಾಡಿಕೊಂಡು ಹೃದಯಾಘಾತದಿಂದ ತಾಯಿಯೊಬ್ಬರು ಮೃತಪಟ್ಟ ಘಟನೆ ನಗರದಲ್ಲಿ ನಡೆದಿದೆ.
ನಗರದ ಲಕ್ಷ್ಮೀಬಾಯಿ ರಾಮಸಿಂಗ್ ಜಾಧವ (70) ನಿಧನರಾದವರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಅಶೋಕಕುಮಾರ ಜಾಧವ ಅವರು ನಿಮೋನಿಯಾ ಚಿಕಿತ್ಸೆಗಾಗಿ ಬಿಎಲ್‌ಡಿಇ ಆಸ್ಪತ್ರೆಗೆ ದಾಖಲಾಗಿದ್ದರು. ಇದರಿಂದ ತಾಯಿ ಲಕ್ಷ್ಮಿಬಾಯಿ ಎಲ್ಲಿ ತಮ್ಮ ಮಗನಿಗೆ ಕೊರೋನಾ ಸೋಂಕು ತಗುಲಿದೆ ಎಂದು ಭಾವಿಸಿ ತೀವ್ರ ಆತಂಕಕ್ಕೊಳಗಾಗಿದ್ದರು. ತಕ್ಷಣವೇ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ತಕ್ಷಣ ಅವರನ್ನು ಸಹ ಬಿಎಲ್‌ಡಿಇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಹೃದಯಾಘಾತದಿಂದ ಅವರು ಕೊನೆಯುಸಿರೆಳೆದಿದ್ದಾರೆ.
ಕಳೆದ ವಾರದ ಹಿಂದಷ್ಟೇ ಕುಟುಂಬದ ಸದಸ್ಯರೆಲ್ಲರೂ ಕೋವಿಡ್ ಟೆಸ್ಟ್ ಮಾಡಿಸಿಕೊಂಡಿದ್ದಾರೆ. ಎಲ್ಲರಿಗೂ ನೆಗೆಟಿವ್ ವರದಿ ಬಂದಿತ್ತು. ನ್ಯೂಮೋನಿಯಾ ಉಸಿರಾಟದ ತೊಂದರೆಯಿಂದ ಬಿಎಲ್‌ಡಿಇ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಡಾ. ಅಶೋಕಕುಮಾರ ಜಾಧವ ಅವರು ಸಹ ಎರಡನೇಯ ಬಾರಿಯೂ ಕೊರೋನಾ ಟೆಸ್ಟ್ ಮಾಡಿಸಿಕೊಂಡಿದ್ದು, ಎರಡನೇಯ ಬಾರಿ ಕೋವಿಡ್ ಟೆಸ್ಟದಲ್ಲೂ ನೆಗೆಟಿವ್ ರಿಪೋರ್ಟ್ ಬಂದಿದೆ. ಆದರೆ ಮಗನಿಗೆ ಹೆಮ್ಮಾರಿ ಕೊರೋನಾ ಸೋಂಕು ತಗುಲಿದೆ ಎನ್ನುವ ಭಯದಲ್ಲೇ ತಾಯಿ ಲಕ್ಷ್ಮೀಬಾಯಿಯವರು ತೀವ್ರ ಹೃದಯಾಘಾತಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿ ಅಸುನೀಗುವಂತಾಗಿದೆ.
ಮೃತರಿಗೆ ಡಾ.ಅಶೋಕ ಜಾಧವ ಸೇರಿದಂತೆ ನಾಲ್ವರು ಪುತ್ರರು ಇದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss