Wednesday, August 10, 2022

Latest Posts

ವಿಜಯಪುರ| ಮತ್ತೆ ನಾಲ್ವರಿಗೆ ಕೊರೋನಾ ದೃಢ: ಸೋಂಕಿತರ ಸಂಖ್ಯೆ 221 ಕ್ಕೆ ಏರಿಕೆ

ವಿಜಯಪುರ: ಜಿಲ್ಲೆಯಲ್ಲಿ ಗುರುವಾರ 2 ವರ್ಷದ ಬಾಲಕಿ ಸೇರಿದಂತೆ ನಾಲ್ಕು ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಆರು ಜನರು ಸಾವಿಗೀಡಾಗಿದ್ದು, ಸೋಂಕಿತರ ಸಂಖ್ಯೆ 221 ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಹೇಳಿದರು.
ಈ ಕುರಿತು ಮಾಹಿತಿ ನೀಡಿದ ಅವರು, ರೋಗಿ ಸಂಖ್ಯೆ 5011ರ ಸಂಪರ್ಕದಿಂದ 35 ವರ್ಷದ ವ್ಯಕ್ತಿ (ಪಿ 6114), 13 ವರ್ಷದ ಬಾಲಕಿ (ಪಿ 6115), 7 ವರ್ಷದ ಬಾಲಕ (ಪಿ 6116) ಹಾಗೂ 2 ವರ್ಷದ ಬಾಲಕಿ (ಪಿ 6117)ಗೆ ಸೋಂಕು ದೃಢಪಟ್ಟಿದ್ದು, ಚಿಕಿತ್ಸೆಗಾಗಿ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು 16 ರೋಗಿಗಳು ಗುಣಮುಖಗೊಂಡು, ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಇಲ್ಲಿವರೆಗೆ ಒಟ್ಟು 147 ಸೋಂಕಿತರು ಗುಣಮುಖರಾಗಿದ್ದು, ಇನ್ನುಳಿದ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss