Tuesday, July 5, 2022

Latest Posts

ವಿಜಯಪುರ: ಮಹಾನಗರ ಪಾಲಿಕೆ ಬಿಜೆಪಿ ಮಾಜಿ ಸದಸ್ಯನ ಮೇಲೆ ಪೊಲೀಸರ ದೌರ್ಜನ್ಯ

ವಿಜಯಪುರ: ಮಹಾನಗರ ಪಾಲಿಕೆ ಬಿಜೆಪಿ ಮಾಜಿ ಸದಸ್ಯ ಪ್ರಕಾಶ ಮಿರ್ಜಿ ಮೇಲೆ ನಗರ ಗಾಂಧಿಚೌಕ್ ಹಾಗೂ ಸಂಚಾರಿ ಠಾಣೆಯ ಎ.ಎಸ್.ಐ. ಹಾಗೂ ಹೆಡ್ ಕಾನ್ಸಟೇಬಲ್ ನಿಂದ ಹಲ್ಲೆ ನಡೆದ ಘಟನೆ ಸಂಭವಿಸಿದೆ.
ಇಲ್ಲಿನ ಗಾಂಧಿಚೌಕ್ ಬಳಿ ಮಹಿಳೆಯೊರ್ವಳಿಗೆ ಮಾಸ್ಕ್ ಧರಿಸದೇ ಇದುದ್ದಕ್ಕೆ ದಂಡ ವಿಧಿಸುತ್ತಿದ್ದಾಗ, ಆ ಮಹಿಳೆ ಮಾಜಿ ಸದಸ್ಯನಿಗೆ ಪೊನ್ ಮಾಡಿದ್ದರಿಂದ, ಆ ವೇಳೆ ಗಾಂಧಿಚೌಕ್ ತೆರಳಿದ್ದಾರೆ. ಆಗ ಸ್ಥಳದಲ್ಲಿದ್ದ ಮಹಿಳಾ ಪಿ.ಎಸ್.ಐ. ಚೌರ ಎಂಬುವರಿಂದ ಮಹಿಳೆಯ ಎದೆಯ ಮೇಲಿನ ಬಟ್ಟೆ ಹಿಡಿದು ಎಳೆದಾಗ, ಪ್ರಕಾಶ ಮಿರ್ಜಿ ಆಕ್ಷೇಪ ವ್ಯಕ್ತಪಡಿಸಿದಾಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ, ಮಿತಿ ಮೀರಿದೆ. ಆಗ ಪೊಲೀಸರು ಅಧಿಕಾರ ದರ್ಪದಿಂದ ಕಾನೂನು ಕೈಗೆ ಎತ್ತಿಕೊಂಡು ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ನೋವಿನಿಂದ ತಿಳಿಸಿದ್ದಾರೆ.
ಅಲ್ಲದೆ, ಮಹಿಳಾ ಪಿಎಸ್ ಐ ಚೌರ್, ಸಂಚಾರಿ ಎಎಸ್ ಐ ಕೇಶವಾಪುರ ಹಾಗೂ ದುರ್ವತನೆ ತೋರಿದ ಸಿಬ್ಬಂದಿಯನ್ನು ಕೂಡಲೇ ಅಮಾನತ್ತುಗೊಳಿಸಿ, ಇವರ ವಿರುದ್ಧ ಕ್ರಮಿನಲ್ ಪ್ರಕರಣ ದಾಖಲಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss